HEALTH TIPS

ಇಚ್ಲಂಗೋಡು ಇಸ್ಲಾಮಿಯಾ ಎಎಲ್‍ಪಿ ಶಾಲೆಯಲ್ಲಿ 4 ರಂದು 80 ನೇ ವಾರ್ಷಿಕೋತ್ಸವ

ಕುಂಬಳೆ: ಎಂಟು ದಶಕಗಳ ಶಿಕ್ಷಣ ಪರಂಪರೆಯನ್ನು ಹೊಂದಿರುವ ಇಚ್ಲಂಗೋಡ್ ಇಸ್ಲಾಮಿಯಾ ಎಎಲ್‍ಪಿ ಶಾಲೆಯ 80 ನೇ ವಾರ್ಷಿಕೋತ್ಸವ ಆಚರಣೆ ಶನಿವಾರ ನಡೆಯಲಿದೆ ಎಂದು ಸಂಘಟಕರು ಕುಂಬಳೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 


ಕಾರ್ಯಕ್ರಮಗಳು ಮಧ್ಯಾಹ್ನ 2 ಗಂಟೆಯಿಂದ ಬಿರೋಲಿಕಾ ಮೈದಾನದಲ್ಲಿ ನಡೆಯಲಿವೆ.ಇದರ ಭಾಗವಾಗಿ, ಶಾಲೆಯ 80 ವರ್ಷಗಳ ಇತಿಹಾಸವನ್ನು ದಾಖಲಿಸುವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಹೊಸ ಅಡುಗೆಮನೆ ಮತ್ತು ಅಂಗಡಿಯ ನಿರ್ಮಾಣದ ನೇತೃತ್ವ ವಹಿಸಿದ್ದ ಗುತ್ತಿಗೆದಾರರಾದ ಶಾಲಾ ವ್ಯವಸ್ಥಾಪಕ ಮುಹಮ್ಮದ್ ಅನ್ಸಾರಿ ಶೆರೂಲ್. ಸ್ಮರಣ ಸಂಚಿಕೆ ವಿನ್ಯಾಸಕ ಸಬೀರ್ ಮತ್ತು ತಾರಾನಾಥ್ ಅವರನ್ನು ಸನ್ಮಾನಿಸಲಾಗುವುದು.

ಮಾಜಿ ಮುಖ್ಯೋಪಾಧ್ಯಾಯ ದಿ.ರಂಜಿತ್ ಮಾಸ್ತರ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ದತ್ತಿನಿಧಿಯನ್ನು ವಿತರಿಸಲಾಗುವುದು. ಜೊತೆಗೆ ಶಾಲೆಯಲ್ಲಿ ನಡೆದ 'ಮೆಗಾ ರಸಪ್ರಶ್ನೆ' ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುವುದು.

ಸಾಮಾನ್ಯ ಸಭೆಯ ನಂತರ, ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುವುದು. ನಂತರ, ರಾತ್ರಿ 8 ರಿಂದ  ರಾಜ್ಯ ಪ್ರಶಸ್ತಿ ವಿಜೇತ ಸುಧೀರ್ ಮಡವೂರು ನೇತೃತ್ವದಲ್ಲಿ 'ಮ್ಯಾಜಿಕ್ ಸಿಲ್ಸಿಲಾ 30' ಎಂಬ ಮ್ಯಾಜಿಕ್ ಶೋ ಹಾಗೂ ಕೋಝಿಕ್ಕೋಡ್ ಎಕೋ ಮ್ಯೂಸಿಕಲ್ ಬ್ಯಾಂಡ್ ಪ್ರದರ್ಶಿಸುವ ಗೀತೋತ್ಸವ ನಡೆಯಲಿದೆ.

ಮಂಜೇಶ್ವರ ಎಇಒ ಜಾರ್ಜ್ ಕ್ರಾಸ್ತಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕುಂಬಳೆ ಸಿಐ ಬೈಜು ಕೆ. ಜೋಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಕಾರ್ಯಕ್ರಮ ಸಮಿತಿ ಅಧ್ಯಕ್ಷ ಮಜೀದ್ ಪಚ್ಚಂಬಳ ಅಧ್ಯಕ್ಷತೆ ವಹಿಸುವರು. ಮುಖ್ಯ ಶಿಕ್ಷಕ ಜಿಜೇಶ್ ಪ್ರಾಸ್ತಾವಿಕವಾಗಿ ಮಾತನಾಡುವರು. ಪಿಟಿಎ ಅಧ್ಯಕ್ಷ ನಸೀಮ್ ಇಚ್ಲಂಗೋಡು ಉಪಸ್ಥಿತರಿರುವರು. 

ಸಂಘಟನಾ ಸಮಿತಿಯ ಪ್ರಧಾನ ಸಂಯೋಜಕ ಮಜೀದ್ ಪಚ್ಚಂಬಳ, ಪ್ರಧಾನ ಸಂಯೋಜಕ ಹಸನ್ ಇಚ್ಲಂಗೋಡ್, ಪಿಟಿಎ ಅಧ್ಯಕ್ಷ ನಸೀಮ್ ಮೊಗರ್, ಮುಖ್ಯ ಶಿಕ್ಷಕ ಜಿಜೇಶ್ ಮತ್ತು ಬಶೀರ್ ಮಾಸ್ತರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries