ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಮಂಗಳವಾರ ಅಡೂರಿನ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಮನೆಯಲ್ಲಿ ಓಣಂ ಆಚರಣೆ ಹಾಗೂ ಮಾಸಿಕ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಭಾದ ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ, ಸದಸ್ಯರಾದ ಶ್ರೀಪತಿ ಎಂ, ರಾಜಾರಾಮ ಸರಳಾಯ, ಅನಂತರಾಮ ಎಂ, ವಿಜಯರಾಜ ಪಿ, ಅನಿಲ್ ಕುಮಾರ್ ಎ, ಚಂಚಲಾ, ನಳಿನಾಕ್ಷಿ, ಕಮಲಾಕ್ಷಿ, ಶೋಭಾ ಶ್ರೀಪ್ರಕಾಶ್, ಲತಾ ಆರ್ ಕೆ, ಪದ್ಮಾ ಆರ್, ಎ. ಬಾಲಕೃಷ್ಣ ತಂತ್ರಿ, ಸುಮತಿ ಬಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಓಣ ಆಚರಣೆಯ ಅಂಗವಾಗಿ ಅನನ್ಯಾ ಭಾರಿತ್ತಾಯ, ಪ್ರಮಿತಾ ಭಾರಿತ್ತಾಯ, ಪ್ರತಿಮಾ ಭಾರಿತ್ತಾಯ ಹಾಗೂ ಆದ್ಯಂತ್ ಅಡೂರು ಜಂಟಿಯಾಗಿ ಹೂವಿನ ರಂಗೋಲಿ ರಚಿಸಿದರು. ಪ್ರಶಾಂತ್ ರಾಜ್ ವಿ ತಂತ್ರಿ ಸ್ವಾಗತಿಸಿ, ಅನಂತರಾಮ ಎಂ ವಂದಿಸಿದರು.


