ಮಂಜೇಶ್ವರ : ಹೊಂಡಗುಂಡಿಗಳಿಂದ ಕೂಡಿದ ಗ್ರಾಮೀಣ ರಸ್ತೆಗಳು ಹಾಗೂ ಇಕ್ಕಟ್ಟಾದ ರಾಷ್ಟ್ರೀಯ ಹೆದ್ದಾರಿಯೇ ಎಡ -ಬಲ ರಂಗಗಳು ಮಂಜೇಶ್ವರ ಜನತೆಗೆ ನೀಡಿದ ಕೊಡುಗೆ ಎಂದು ಮಾಜಿ ಶಾಸಕರಾದ ಎ ಪಿ ಅಬ್ದುಲ್ಲ ಕುಟ್ಟಿ ತಿಳಿಸಿದರು.
ವರ್ಕಾಡಿಯ ಬಾಕ್ರಬೈಲಿನಲ್ಲಿ ಶನಿವಾರ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಪರ್ಯಟನೆಯ ಉದ್ಘಾಟನಾ ಸಭೆಯಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿಯ ಅಭಿವೃದ್ಧಿಯ ಕಾರ್ಯಗಳನ್ನು ಶ್ಲಾಘಿಸಿದಾಗ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದವರು, ಈಗ ಅಭಿವೃದ್ಧಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿಯನ್ನು ನೀಡಿ ಮತಯಾಚಿಸುತಿದ್ದರೆ ಎಂದು ಅವರು ಆರೋಪಿಸಿದರು. ಬಿಜೆಪಿ ಗೆ ಅವಕಾಶ ನೀಡಿದರೆ ಮಂಜೇಶ್ವರವು ಅಭಿವುದ್ಧಿಯ ಪಥದಲ್ಲಿ ಸಾಗುವುದು. ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕ್ಕಾರವು ನಡೆಸುತ್ತಿರುವುದು ಜನದ್ರೋಹ ನೀತಿ ಮಾತ್ರವಲ್ಲ ದೈವ ದ್ರೋಹ ನೀತಿಯನ್ನೂ ಅನುಸರಿಸುತ್ತಿರುವನು. ಬಿಜೆಪಿಯು ಅಲ್ಪಸಂಖ್ಯಾತರ ಮೇಲೆ ಮತೀಯ ವರ್ಗೀಯತೆಯ ನೀತಿಯನ್ನು ಅನುಸರಿಟ್ಟಿದೆ ಎಂದೂ, ಪ್ರದೇಶದ ಹಲವಾರು ನವ ಮಾಧ್ಯಮಗಳಲ್ಲಿ ತಪ್ಪಾದ ಪಕ್ಷದ ವಿರುದ್ಧ ತಪ್ಪಾದ ಮಾಹಿತಿಗಳನ್ನು ಹರಿದಾಡಿಸುತ್ತಿದ್ದಾರೆ ಎಂದೂ ಸೂಚಿಸಿದರು. ಬಿಜೆಪಿ ಆಡಳಿತ ನಡೆಸುವ ರಾಜ್ಯಗಳಲ್ಲಿ 32 ಕೈ ಸ್ತ ಸಂಸದರ ಸಾನಿಧ್ಯವೇ ಇದ್ದಕ್ಕೆ ತಕ್ಕ ಸಾಕ್ಷ್ಯ. ಆದುದರಿಂದ ಈ ರೀತಿಯ ತಪ್ಪು ಭಾವನೆಯನ್ನು ಜನರಮನಸ್ಸಿನಲ್ಲಿ ಮೂಡಿಸಿ ಅಲ್ಪಸಂಖ್ಯಾತರನ್ನು ಕೆರಳಿಸುವ ಕುತಂತ್ರವು ಬರೀ ವಿಫಲ ಯತ್ನ ಎಂದು ಅಬ್ದುಲ್ಲ ಕುಟ್ಟಿ ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಚೇಟೂರು ಬಾಲಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ. ವಿ ಬಾಲಕೃಷ್ಣ ಶೆಟ್ಟಿ, ಮಂಡಲ ಉಪಾಧ್ಯಕ್ಷ ಧೂಮಪ್ಪ ಶೆಟ್ಟಿ,ಬಿಜೆಪಿ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಬೇಬಿ ಸುನಾಗರ್ , ಕಾಸರಗೋಡು ಮ0ಡಲ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ನಾರಂಪಾಡಿ , ಮನುಲಾಲ್ ಮೇಲೊತ್, ಪ್ರಭುಜಿತ್,ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ಎನ್ ಡಿ ಎ ಚುನಾವಣಾ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,ವಿದ್ಯಾನಂದ , ಯು ಸದಾಶಿವ ಮುಂತಾದವರು ಭಾಗವಹಿಸಿದರು.


