ಮಧೂರು: ಕುತ್ಯಾಳ ಶ್ರೀ ಗೋಪಾಲಕೃಷ್ಣ ನಾಟಕ ಸಭಾ ಕೂಡ್ಲು ಮೇಳದ ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ಡಿ.20 ರಂದು ನಡೆಯಲಿದೆ. ಪಾಂಡವಾಶ್ವಮೇಧ(ಕಾಲ ಮಿತಿ) ಪ್ರಸಂಗದ ಯಕ್ಷಗಾನ ಬಯಲಾಟ ಜರಗಲಿದೆ. ಡಿ.21 ರಂದು ರಾತ್ರಿ 9.30 ಕ್ಕೆ ಶ್ರೀ ಕ್ಷೇತ್ರದಲ್ಲಿ `ನಳದಮಯಂತಿ, ಜಾಂಬವತಿ ಪರಿಣಯ' ಪ್ರಸಂಗದ ಯಕ್ಷಗಾನ ಬಯಲಾಟ ನಡೆಯುವುದು.
ತೆಂಕುತಿಟ್ಟಿನ ಅತಿ ಪ್ರಾಚೀನ ಮೇಳವಾದ ಕೂಡ್ಲು ಮೇಳ ಹಿಂದೆ ದಿಗ್ಗಜ ಕಲಾವಿದರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸುವಲ್ಲಿ ಪ್ರಸಿದ್ದವಾಗಿತ್ತು. ಅಲ್ಪ ಸಮಯ ಪ್ರದರ್ಶನಗಳನ್ನು ನಿಲ್ಲಿಸಿದ್ದ ಮೇಳ ಕಳೆದ ಕೆಲವು ವರ್ಷಗಳಿಂದ ಸಾಂಪ್ರದಾಯಿಕ ಪ್ರದರ್ಶನಗಳಿಂದ ಮತ್ತೆ ಸಕ್ರಿಯವಾಗಿದೆ.


