ಪೆರ್ಲ:ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಹಾಗೂ ಶಾರದಾ ಮರಾಟಿ ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪೆರ್ಲ ಮರಾಟಿ ಬೋಡಿರ್ಂಗ್ ಹಾಲ್ ನಲ್ಲಿ ನಡೆಯಿತು.
ಶಾ.ಮ.ಸ.ಸೇ.ಸಂ.ದ ನೂತನ ಅಧ್ಯಕ್ಷರಾಗಿ ಐತಪ್ಪ ನಾಯ್ಕ ಕುಂಬಳೆ, ಉಪಾಧ್ಯಕ್ಷರಾಗಿ ರಾಮ ಮಾಸ್ತರ್, ಕಾರ್ಯದರ್ಶಿಯಾಗಿ ಲಕ್ಷ್ಮಿ ಟೀಚರ್,ಜೊತೆ ಕಾರ್ಯದರ್ಶಿ ಪರಮೇಶ್ವರ್ ನಾಯ್ಕ ನಲ್ಕ, ಕೋಶಾಧಿಕಾರಿ ಜಗದೀಶ್ ನಲ್ಕ, ನಿರ್ವಹಣಾ ಸಮಿತಿಗೆ ಸತೀಶ್ ಕುಮಾರ್ ಕಯ್ಯಾರ್ ಹಾಗೂ 19 ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶಾ.ಮ.ಮಹಿಳಾ ವೇದಿಕೆ ಅಧ್ಯಕ್ಷೆ ಯಾಗಿ ಪೂರ್ಣಿಮ ಪುರಂದರ. ಮತ್ತು ಕಾರ್ಯದರ್ಶಿಯಾಗಿ ಲಲಿತಾ ಕೇಶವ ಅವರನ್ನು ಆಯ್ಕೆಮಾಡಲಾಯಿತು.


