ಮಧೂರು: ಪಾರೆಕಟ್ಟೆಯ ಕನ್ನಡ ಗ್ರಾಮದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ 30 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕೇರಳ ರಾಜ್ಯ 7 ನೇ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದ ಲಾಂಛನವನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಕೇರಳ ರಾಜ್ಯ 7 ನೇ ಸಮ್ಮೇಳನವು ಜ.30 ಮತ್ತು 31 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿದೆ. ಸಮ್ಮೇಳನದ ಪೂರ್ವಭಾವಿಯಾಗಿ ನಡೆದ ಸಿದ್ಧತಾ ಸಮಾಲೋಚನಾ ಸಭೆಯಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಮಾಧವ ಮಾಸ್ತರ್ ಕೂಡ್ಲು, ಕಾಸರಗೋಡು ನಗರಸಭಾ ಕೌನ್ಸಿಲರ್ ಕೆ.ಶಂಕರ ಜೆ.ಪಿ.ನಗರ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ನಿರಂಜನ ಕೊರಕ್ಕೋಡು, ಕೆ.ಸಿ.ಎನ್. ಚಾನೆಲ್ ನಿರ್ದೇಶಕ ಪುರುಷೋತ್ತಮ ಎಂ. ನಾೈಕ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕೂಡ್ಲು ಉಪಸಂಘದ ಅಧ್ಯಕ್ಷ ಬಿ.ಸತೀಶ್ ಕೂಡ್ಲು, ದಯಾನಂದ ಬೆಳ್ಳೂರಡ್ಕ. ಕೆ.ಚಂದ್ರಶೇಖರ ಪಾರೆಕಟ್ಟೆ, ಪಿ.ದಿವಾಕರ ಅಶೋಕನಗರ, ರಾಜೇಂದ್ರ ಕೆ.ಎನ್, ಕೆ.ಹರೀಶ್, ರಕ್ಷಿತ್ ಕೆ, ಲೋಹಿತ್ ಕುಮಾರ್, ಗಣೇಶ್ ಕೆ. ಎನ್.ಯೋಗೀಶ್ ಕೋಟೆಕಣಿ, ಪ್ರಶಾಂತ್ ಮಾಸ್ತರ್, ಕುಶಲ ಕುಮಾರ್ ಕೆ, ಕಿಶೋರ್ ಕುಮಾರ್ ಕೆ, ಮುರಳೀಧರ ಪಾರೆಕಟ್ಟೆ, ಕೆ.ಸತ್ಯನಾರಾಯಣ ಕಾಸರಗೋಡು ಮೊದಲಾದವರು ಸಲಹೆ, ಸೂಚನೆಗಳನ್ನು ನೀಡಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಮತ್ತು ಜೊತೆ ಕಾರ್ಯದರ್ಶಿ ಕೆ.ಮುರಳೀಧರ ಪಾರೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಅವರು ಮಾತನಾಡಿ ಕನ್ನಡ ಗ್ರಾಮಕ್ಕೆ ಬರುವ ರಸ್ತೆಗೆ ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿಕೊಡಲಾಗುವುದೆಂದರು. ಕನ್ನಡ ಗ್ರಾಮ ಪರಿಸರದ ಜೆ.ಪಿ.ನಗರ, ಪಾರೆಕಟ್ಟೆ ರಸ್ತೆಗೆ ಕಾಸರಗೋಡು ನಗರಸಭೆಯ ವತಿಯಿಂದ ಮರು ಡಾಮರೀಕರಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಸದಸ್ಯ ಕೆ.ಶಂಕರ್ ಅವರು ತಿಳಿಸಿದರು.


