HEALTH TIPS

ರೆಡ್ ಕ್ರಾಸ್ ಸಂಸ್ಥೆ ಮೂಲಕ ಭಾರತಕ್ಕೆ ಅಮೆರಿಕ ವೆಂಟಿಲೇಟರ್ ರವಾನೆ!

     
          ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಎದುರು ಹೋರಾಡುತ್ತಿರುವ ಭಾರತಕ್ಕೆ ವೆಂಟಿಲೇಟರ್ ಗಳ ರವಾನೆ ಮಾಡುವುದಾಗಿ ಘೋಷಣೆ ಮಾಡಿರುವ ಅಮೆರಿಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಲಕವಾಗಿ ವೆಂಟಿಲೇಟರ್ ಗಳನ್ನು ಭಾರತಕ್ಕೆ ರವಾನೆ ಮಾಡುವುದಾಗಿ ಹೇಳಿದೆ.
         ಈ ಕುರಿತಂತೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಅಮೆರಿಕದ ಯುನೈಟೆಡ್ ಸ್ಟೇಟ್ಸಲ್ ಏಜೆನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲೆಪ್ ಮೆಂಟ್ ಸಂಸ್ಥೆಯ ಮುಖಾಂತರವಾಗಿ ರೆಡ್ ಕ್ರಾಸ್ ಸಂಸ್ಥೆಗೆ ವೆಂಟಿಲೇಟರ್ ಗಳನ್ನು ಹಸ್ತಾಂತಿರಸಲಾಗುತ್ತದೆ. ಅವರು ಭಾರತ ಸರ್ಕಾರಕ್ಕೆ  ವೆಂಟಿಲೇಟರ್ ಗಳನ್ನು ಹಸ್ತಾಂತರಿಸಲಿದ್ದಾರೆ ಎನ್ನಲಾಗಿದೆ.
      ಮೂಲಗಳ ಪ್ರಕಾರ ಪ್ರತೀಯೊಂದು ಮೊಬೈಲ್ ವೆಂಟಿಲೇಟರ್ ಗಳ ದರ ಸುಮಾರು 10 ಲಕ್ಷ ರೂಗಳಿದ್ದು, ಇಂತಹ 200 ವೆಂಟಿಲೇಟರ್ ಗಳನ್ನು ವಿಮಾನದ ಮೂಲಕ ಭಾರತಕ್ಕೆ ರವಾನಿಸಲಾಗುತ್ತದೆ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ 200 ವೆಂಟಿಲೇಟರ್ ಗಳನ್ನು ಭಾರತ  ಕೈ ಸೇರುವ ಸಾಧ್ಯತೆ ಇದೆ.  ಮೇ ಅಂತ್ಯಕ್ಕೆ 100 ವೆಂಟಿಲೇಟರ್ ಗಳನ್ನು ರವಾನಿಸಿ ಜೂನ್ ಮೊದಲ ವಾರದಲ್ಲಿ ಮತ್ತೆ 100 ವೆಂಟಿಲೇಟರ್ ಗಳನ್ನು ನೀಡಲಾಗುತ್ತದೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಈ ಕುರಿತಂತೆ ಶೀಘ್ರದಲ್ಲೇ ಅಮೆರಿಕ ಅಧಿಕಾರಿಗಳು ಭಾರತಕ್ಕೆ  ವೆಂಟಿಲೇಟರ್ ಗಳ ಮಾಡೆಲ್ ಮತ್ತು ತಾಂತ್ರಿಕ ಮಾಹಿತಿ ನೀಡಲಿದ್ದಾರೆ. 
           ವೆಂಟಿಲೇಟರ್ ನೀಡಿಕೆ ವ್ಯಾಪಾರವಲ್ಲ, ಭಾರತ ಅಮೆರಿಕ ಸ್ನೇಹದ ದ್ಯೋತಕ:
     ಭಾರತವು ಈ ಹಿಂದೆ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಗಳನ್ನು ಪೂರೈಸಿದ್ದಕ್ಕೆ ಪ್ರತಿಯಾಗಿ ವೆಂಟಿಲೇಟರ್ ನೀಡುತ್ತಿಲ್ಲ ಎಂದು ಟ್ರಂಪ್ ಸರ್ಕಾರ ಸ್ಪಷ್ಟ ಪಡಿಸಿದ್ದು, ಉಭಯ ದೇಶಗಳ ನಡುವಿನ ಸಹಭಾಗಿತ್ವ ಮತ್ತು ಸ್ನೇಹದ ದ್ಯೋತಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ.  ಒಂದರ ಬದಲು ಮತ್ತೊಂದು ಎಂಬ ರೀತಿಯಲ್ಲಿ ಭಾರತಕ್ಕೆ ವೆಂಟಿಲೇಟರ್ ಕೊಡುಗೆ ನೀಡುತ್ತಿಲ್ಲ. ಇದು ಸಹಭಾಗಿತ್ವದ ಕ್ರಮವಾಗಿದೆ. ಈ ಹಂತದಲ್ಲಿ ಸಾಧ್ಯವಿರುವ ಮಟ್ಟಿಗೆ ಪರಸ್ಪರ ಸಹಕಾರ, ಸಹಭಾಗಿತ್ವದ ಅಗತ್ಯವಿದೆ. ಈ ಕಾರಣದಿಂದ ಅಮೆರಿಕವು , ತನ್ನ ಅಗತ್ಯಕ್ಕೆ ಸಾಕಷ್ಟು  ಇರಿಸಿಕೊಂಡು ಅಗತ್ಯ ಇರುವ ದೇಶಗಳಿಗೆ ನೀಡಲಿದೆ ಎಂದು ಅಮೆರಿಕದ ಯುಎಸ್‍ಎಯ್ಡ್ ಪ್ರಭಾರಿ ನಿರ್ದೇಶಕರು ಹೇಳಿದ್ದಾರೆ.
      ಕೊರೋನ ಸೋಂಕಿನ ವಿರುದ್ಧ ಹೋರಾಟಕ್ಕೆ ಇದುವರೆಗೆ ಭಾರತಕ್ಕೆ 5.9 ಮಿಲಿಯನ್ ಡಾಲರ್ ನೆರವನ್ನು ಅಮೆರಿಕ ನೀಡಿದೆ. ಭಾರತವು ಅಮೆರಿಕದಿಂದ ಕೊರೋನ ಪರೀಕ್ಷೆಯ ಕಿಟ್ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತಕ್ಕೆ ಇತರ ಔಷಧಿಗಳ ಪೂರೈಕೆ  ಪ್ರಕ್ರಿಯೆಯು ಭಾರತ-ಅಮೆರಿಕ ನಡುವಿನ ಲಸಿಕೆ ಯೋಜನೆಯಡಿ ನಡೆಯುತ್ತದೆ ಎಂದು ಹೇಳಿದರು.
   ಭಾರತಕ್ಕೆ ಕೊರೋನ ವೈರಸ್ ಸೋಂಕಿನ ವಿರುದ್ಧದ ಸಮರದಲ್ಲಿ 75,000 ವೆಂಟಿಲೇಟರ್‍ಗಳ ಅಗತ್ಯವಿದೆ. ಭಾರತದ ಬಳಿ 19,398 ವೆಂಟಿಲೇಟರ್‍ಗಳಿದ್ದು 60,884 ವೆಂಟಿಲೇಟರ್‍ಗಳ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸರಕಾರ ಈ ತಿಂಗಳ ಆರಂಭದಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries