ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬಿಜೆಪಿಯು ಈ ಹಿಂದಿಗಿಂತ ಮೂರು ಪಟ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಮತ ಎಣಿಕೆಯಲ್ಲಿ ಯುಡಿಎಫ್-ಎಲ್ ಡಿ ಎಫ್ ಎರಡೂ ಬಣಗಳೂ ಭಾರೀ ಹಿನ್ನಡೆ ಅನುಭವಿಸಲಿದೆ ಎಂದು ಅವರು ಹೇಳಿರುವರು.
ಸಾಂಪ್ರದಾಯಿಕ ಹಿಂದೂ-ಕ್ರಿಶ್ಚಿಯನ್ ಮತದಾರರು ಯುಡಿಎಫ್ ನ್ನು ತ್ಯಜಿಸುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿದರು. ತಿರುವನಂತಪುರ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸುವುದು ಖಚಿತ ಎಂದು ಅವರು ಹೇಳಿದರು.
ತಿರುವನಂತಪುರಂನಲ್ಲಿ ಯುಡಿಎಫ್, ಎಲ್‍ಡಿಎಫ್ ಮತ್ತು ಮುಸ್ಲಿಂ ಸಂಘಟನೆಗಳ ಬಗ್ಗೆ ಮತದಾರರಿಗೆ ಧಾರಾಳ ಅನುಭವಗಳು ಈಗಾಗಲೇ ಆಗಿದೆ. ಜೊತೆಗೆ ಬಿಜೆಪಿಯ ಬಗ್ಗೆ ಅವರಿರಿಸಿರುವ ಭರವಸೆಗಳಿಗೆ ನ್ಯಾಯದೊರಕಿಸಲಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.


