HEALTH TIPS

ಜಿಲ್ಲಾ ಪಂಚಾಯತ್ ವರ್ಕಾಡಿ, ಪುತ್ತಿಗೆ,ದೇಲಂಪಾಡಿ ಮತ್ತು ಬೇಡಗಂ ಡಿವಿಝನ್ ಗಳ ಅಂಚೆ ಬಾಲೆಟ್ ಗಣನೆ ಪೂರ್ಣ

             ಕಾಸರಗೋಡು: ಜಿಲ್ಲಾ ಪಂಚಾಯತ್ ನ ವರ್ಕಾಡಿ ಮತ್ತು ಬೇಡಗಂ ಡಿವಿಝನ್ ಗಳ ಅಂಚೆ ಬಾಲೆಟ್ ಗಳ ಗಣನೆ ಪೂರ್ಣವಾಗಿದೆ.

          ವರ್ಕಾಡಿಯಲ್ಲಿ ಒಟ್ಟು 239 ಅಂಚೆ ಮತಗಳು ಲಭಿಸಿದ್ದುವು. ಇವುಗಳಲ್ಲಿ 39 ಅಸಿಂಧುವಾಗಿದೆ. 101 ಮತಗಳನ್ನು ಎನ್.ಡಿ.ಎ. ಅಭ್ಯರ್ಥಿ ಜಯಕಲಾ ಸಿ.ಅವರಿಗೆ ಲಭಿಸಿದೆ. 52 ಮತಗಳು ಐಕ್ಯರಂಗ ಅಭ್ಯರ್ಥಿ ಕಮಲಾಕ್ಷಿ ಅವರಿಗೆ ಲಭಿಸಿದೆ. 47 ಮತಗಳು ಎಡರಂಗ ಅಭ್ಯರ್ಥಿ ಪುಷ್ಪಾ ಜಯರಾಮ ಅವರಿಗೆ ಲಭಿಸಿದೆ. 

           ಬೇಡಗಂ ನಲ್ಲಿ 376 ಅಂಚೆ ಮತಗಳು ಲಭಿಸಿವೆ. ಇವುಗಳಲಲಿ 26 ಅಸಿಂಧುವಾಗಿವೆ. ಎಡರಂಗ ಅಭ್ಯರ್ಥಿ ನ್ಯಾಯವಾದಿ ಸರಿತಾ ಎಸ್.ಎನ್. 195 ಮತಗಳನ್ನು ಗಳಿಸಿದರು. ಐಕ್ಯರಂಗದ ಅಭ್ಯರ್ಥಿ ನಿಷಾ ಅರವಿಂದ್ 110 ಮತಗಳನ್ನು, ಎನ್.ಡಿ.ಎ.ಯ ಅಭ್ಯರ್ಥಿ ಸುನಿತಾ ರವೀಂದ್ರನ್ 45 ಮತಗಳನ್ನು ಪಡೆದರು.

                        ಜಿಲ್ಲಾ ಪಂಚಾಯತ್ ನ ದೇಲಂಪಾಡಿ ಡಿವಿಝನ್ ನ ಅಂಚೆ ಬಾಲೆಟ್ ಗಳ ಗಣನೆ ಪೂರ್ಣ: 

        ಜಿಲ್ಲಾ ಪಂಚಾಯತ್ ನ ದೇಲಂಪಾಡಿ ಡಿವಿಝನ್ ನ ಅಂಚೆ ಬಾಲೆಟ್ ಗಳ ಗಣನೆ ಪೂರ್ಣ ಗೊಂಡಿದೆ. ಒಟ್ಟು 365 ಅಂಚೆ ಮತಗಳು ಲಭಿಸಿವೆ. ಇದರಲ್ಲಿ 46 ಮತಗಳು ಅಸಿಂಧುವಾಗಿವೆ. ಎಡರಂಗ ಅಭ್ಯರ್ಥಿಗಳು ಎ.ಪಿ.ಕುಶಲನ್ 178 ಮತಗಳನ್ನು ಗಳಿಸಿದರು. ಎನ್.ಡಿ.ಎ. ಅಭ್ಯರ್ಥಿ ಎಂ.ಸುಧಾಮ ಗೋಸಾಡ  74 ಮತಗಳನ್ನು, ಐಕ್ಯರಂಗ ಅಭ್ಯರ್ಥಿ ಪಿ.ಬಿ.ಷಫೀಕ್ 67 ಮತಗಳನ್ನು ಪಡೆದರು. 

                    ಜಿಲ್ಲಾ ಪಂಚಾಯತ್ ನ ಪುತ್ತಿಗೆ ಡಿವಿಝನ್ ನ ಅಂಚೆ ಮತ ಗಣನೆ ಪೂರ್ಣ

          ಜಿಲ್ಲಾ ಪಂಚಾಯತ್ ನ ಪುತ್ತಿಗೆ ಡಿವಿಝನ್ ನ ಅಂಚೆ ಮತಗಣನೆ ಪೂರಣಗೊಂಡಿದೆ. ಒಟ್ಟು 410 ಅಂಚೆ ಮತ ಲಭಿಸಿತ್ತು. ಇದರಲ್ಲಿ 68 ಮತಗಳು ಅಸಿಂಧುವಾಗಿವೆ. ಎನ್.ಡಿ.ಎ. ಅಭ್ಯರ್ಥಿ ನಾರಾಯಣ ನಾಯ್ಕ್ 158 ಮತಗಳಿಸಿದರು. ಎಡರಂಗ ಅಭ್ಯರ್ಥಿ ಬಿ.ವಿಜಯಕುಮಾರ್ 104 ಮತಗಳನ್ನು ಪಡೆದರು. ಐಕ್ಯರಂಗ ಅಭ್ಯರ್ಥಿ ಗೋವಿಂದ ನಾಯ್ಕ್ ಏಳ್ಕಾನ 79 ಮತ ಪಡೆದರು. ಪಿ.ಡಿ.ಪಿ. ಅಭ್ಯರ್ಥಿ ಗೋಪಿ ಕುದಿರಕಲ್ಲು ಒಂದು ಮತ ಪಡೆದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries