HEALTH TIPS

ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಹೇಗೆ?

             ನವದೆಹಲಿ: ಕೊರೊನಾ ಲಸಿಕೆಗಾಗಿ ವಯಸ್ಕರು ಹಾಗೂ ವೃದ್ಧರು ಲಸಿಕಾ ಕೇಂದ್ರಗಳಿಗೆ ಧಾವಿಸುತ್ತಿರುವ ಮಧ್ಯೆ ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ವ್ಯಾಪಕ ಚರ್ಚೆಯಾಗಿದೆ. ಮುಂದಿನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯಗಳಿರುವುದರಿಂದ ಹೆತ್ತವರೂ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಕೊರೊನಾ ರೋಗಲಕ್ಷಗಳು ಹೇಗಿರುತ್ತವೆ ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಲವು ಮಾರ್ಗಸೂಚಿಗಳನ್ನು ಪಟ್ಟಿ ಮಾಡಿದೆ. ಆರೋಗ್ಯ ಸಚಿವಾಲಯ ತನ್ನ ಟ್ವೀಟ್ ನಲ್ಲಿ ಕೊರೊನಾದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ರೋಗ ಲಕ್ಷಣ ರಹಿತ ವಾಗಿರಬಹುದು ಅಥವಾ ಸಣ್ಣಪುಟ್ಟ ರೋಗಲಕ್ಷಣಗಳಷ್ಟೇ ಇರಬಹುದು ಎಂದು ಹೇಳಿದೆ.

                             ಸಾಮಾನ್ಯ ರೋಗ ಲಕ್ಷಣ: 

       ಲಕ್ಷಣರಹಿತವಾಗಿದ್ದರೂ ವೈರಸ್ ನ ಪರಿಣಾಮ ಸುಮಾರು 14 ದಿನಗಳವರೆಗೆ ಇರುತ್ತದೆ. ಇದರಿಂದ ಸೋಂಕಿತನು ವೈರಸನ್ನು ಬಹಳಷ್ಟು ಜನರಿಗೆ ಹರಡುತ್ತಾನೆ. ಅಂತೆಯೇ, ಪಾಸಿಟಿವ್ ಎಂದು ಗೊತ್ತಾದ ಅನೇಕ ದಿನಗಳವರೆಗೆ ಯಾವುದೇ ರೋಗ ಲಕ್ಷಣ ತೋರಿಸದೆ ನಂತರದಲ್ಲಿ ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಸಂಭವವೂ ಇದೆ. ಮಕ್ಕಳಲ್ಲಿ ಕಾಣಿಸುವ ಸಾಮಾನ್ಯ ಲಕ್ಷಣಗಳು- ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ಗಂಟಲು ನೋವು, ಸ್ನಾಯು, ಎಲುಬುಗಳಲ್ಲಿ ನೋವು, ಅತಿಸಾರ, ರುಚಿ ಕಳೆದುಕೊಳ್ಳುವುದು ಇತ್ಯಾದಿ. ಕೆಲವು ಮಕ್ಕಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನೂ ಎದುರಿಸುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

                          ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ: 

       ರೋಗ ಲಕ್ಷಣ ರಹಿತ ಸೋಂಕಿತ ಮಕ್ಕಳಿಗೆ ಮನೆಯಲ್ಲೇ ಚಿಕಿತ್ಸೆ ನೀಡಬಹುದು. ಕುಟುಂಬದ ಸದಸ್ಯರಲ್ಲಿ ಕೊರೊನಾ ಕಾಣಿಸಿಕೊಂಡ ಸಂದರ್ಭದಲ್ಲೇ ಮಕ್ಕಳ ಆರೋಗ್ಯ ಪರಿಶೀಲಿಸಲಾಗುತ್ತದೆ. ರೋಗಲಕ್ಷಣಗಳ ಬೆಳವಣಿಗೆ ಮತ್ತು ನಂತರದ ಚಿಕಿತ್ಸೆಯ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ಅಂತಹ ಮಕ್ಕಳನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿ, ರೋಗ ಲಕ್ಷಣದ ಚಿಕಿತ್ಸೆ ನೀಡಬೇಕು. ಹೃದಯ ಸಮಸ್ಯೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಅಂಗಗಳಲ್ಲಿ ದೀರ್ಘಕಾಲದ ನ್ಯೂನತೆ ಇರುವ ಮಕ್ಕಳಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು ಎಂದು ಸಚಿವಾಲಯದ ಮಾರ್ಗದರ್ಶಿ ತಿಳಿಸಿದೆ. ಭಾರತದ ಲಸಿಕೆ ಬಿಕ್ಕಟ್ಟಿನ ಮಧ್ಯೆ, 2-12 ವರ್ಷದೊಳಗಿನ ಮಕ್ಕಳಿಗೆ ಚುಚ್ಚುಮದ್ದು ನೀಡಲು ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಗೆ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಲಾಗಿದೆ. ಮಕ್ಕಳ ಲಸಿಕೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಲಿನಿಕಲ್ ಪ್ರಯೋಗವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಮಾಡಲಾಗುತ್ತದೆ. ಕೊವಾಕ್ಸಿನ್ ಹೊರತಾಗಿ, ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಲಸಿಕೆಯನ್ನು ಅಮೆರಿಕದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಮೇಲೆ ಪ್ರಯೋಗಿಸಲಾಗಿದೆ. ಅಲ್ಲಿ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಸರ್ಕಾರ ಈಗಾಗಲೇ ಅನುಮತಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries