HEALTH TIPS

ಮಲಬಾರ್ ದಂಗೆಯ ಬಗ್ಗೆ ತನ್ನ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಇಲ್ಲ: ಎಲ್ಲರಿಗೂ ನಾಗರಿಕ ಸ್ವಾತಂತ್ರ್ಯದ ಹಕ್ಕಿದೆ: ಸಭಾಪತಿ

                     ತಿರುವನಂತಪುರಂ: ಮಲಬಾರ್ ಚಳವಳಿಯ ಹುತಾತ್ಮರ ಹೆಸರುಗಳನ್ನು ತೆಗೆದುಹಾಕುವ ಕೇಂದ್ರ ಸರ್ಕಾರದ ಕ್ರಮವು ಸರಿಯಾದ ಕ್ರಮವಲ್ಲ ಮತ್ತು ಮಲಬಾರ್ ಆಂದೋಲನದ ಬಗ್ಗೆ ತನ್ನ ಅಭಿಪ್ರಾಯವನ್ನು ಬದಲಾಯಿಸಲಾಗದು ಎಂದು ಸ್ಪೀಕರ್ ಎಂ.ಬಿ.ರಾಜೇಶ್ ಮಾಧ್ಯಮಗಳಿಗೆ ಇಂದು ಮತ್ತೆ ಹೇಳಿರುವರು. 

              ಮಲಬಾರ್ ಆಂದೋಲನಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ವಿರುದ್ಧ ವಿವಾದವನ್ನು ಸೃಷ್ಟಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಮತ್ತು ಇದು ಕೆಲವರನ್ನು ಕೇಂದ್ರೀಕರಿಸಿ ವಿವಾದ ಸೃಷ್ಟಿಸಲಿದ್ದು ಅವರಿಗೆ ಮಾತ್ರ ಸಹಾಯ ಮಾಡುತ್ತದೆ ಎಂದು ಸ್ಪೀಕರ್ ಮಾಧ್ಯಮಗಳಿಗೆ ತಿಳಿಸಿದರು.

        ಮಲಬಾರ್ ಕ್ರಾಂತಿ ಬ್ರಿಟಿಷರ ವಿರುದ್ಧ ಮತ್ತು ಊಳಿಗಮಾನ್ಯತೆಯ ವಿರುದ್ಧದ ಹೋರಾಟವಾಗಿತ್ತು. ಇತಿಹಾಸವನ್ನು ತಿರುಚುವ ಪ್ರಯತ್ನಗಳ ಬಗ್ಗೆ ಎಚ್ಚರವಹಿಸುವುದು ಇಂದಿನ ತುರ್ತು ಅಗತ್ಯ ಎಮದು ಅವರು ಹೇಳಿದರು. 

               ಮಲಬಾರ್ ದಂಗೆಯ ಹೋರಾಟಗಾರರನ್ನು ಹೊರಗಿಡುವುದು ಐತಿಹಾಸಿಕ ಅಪಚಾರ ಎಂದು ಇಡೀ ಕೇರಳ ಹೇಳಿದೆ. ಎಂ.ಬಿ ರಾಜೇಶ್ ಅವರೂ  ತನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.


                        ಎಲ್ಲರಿಗೂ ನಾಗರಿಕ ಸ್ವಾತಂತ್ರ್ಯವಿದೆ. ಸಭಾಪತಿ ಹುದ್ದೆ ಸನ್ಯಾಸಿಯಂತಹ ಸ್ಥಾನವಲ್ಲ. ಸಾರ್ವಜನಿಕ ವಿಷಯಗಳ ಬಗ್ಗೆ ಮಾತನಾಡಬೇಕು ಎಂದು ಅವರು ಒತ್ತಿ ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries