HEALTH TIPS

ಇಂಧನ ಟ್ಯಾಂಕ್‍ಗಳನ್ನು ಉಡಾಯಿಸುವುದಾಗಿ ಮತ್ತೊಮ್ಮೆ ಬೆದರಿಕೆ: ಕೊಚ್ಚಿನ್ ಶಿಪ್ ಯಾರ್ಡ್ ಗೆ ಎರಡನೇ ಬಾರಿ ಇ-ಮೇಲ್

                                                            

                ಎರ್ನಾಕುಳಂ: ಕೊಚ್ಚಿ ಶಿಪ್ ಯಾರ್ಡ್ ಮೇಲೆ ದಾಳಿ ಮಾಡುವುದಾಗಿ ಮತ್ತೊಂದು ಬೆದರಿಕೆ ಸಂದೇಶ ಬಂದಿರುವುದಾಗಿ ತಿಳಿಸಲಾಗಿದೆ. ಈ ಸಂಬಂಧ ಶಿಪ್ ಯಾರ್ಡ್ ಅಧಿಕಾರಿಗಳಿಗೆ ಬೆದರಿಕೆ ಸಂದೇಶ ಬಂದಿದ್ದು, ಘಟನೆ ಕುರಿತು ಪೋಲೀಸರಿಗೆ ದೂರು ನೀಡಲಾಗಿದೆ.

                      ಹಡಗುಕಟ್ಟೆಯಲ್ಲಿರುವ ಇಂಧನ ಟ್ಯಾಂಕ್‍ಗಳನ್ನು ನಾಶಪಡಿಸಲಾಗುವುದು ಮತ್ತು ದಾಳಿ ಮಾಡಲಾಗುವುದು ಎಂದು ಬೆದರಿಕೆ ಸಂದೇಶದಲ್ಲಿ ಹೇಳಲಾಗಿದೆ. ಇ-ಮೇಲ್ ಬಂದ ತಕ್ಷಣ, ಶಿಪ್‍ಯಾರ್ಡ್ ಅಧಿಕಾರಿಗಳು ಸಿ ಐ ಎಸ್ ಎಫ್ ಗೆ ಮಾಹಿತಿ ನೀಡಿದರು.

                    ಕಳೆದ ಎರಡು ವಾರಗಳಲ್ಲಿ ಹಡಗುಕಟ್ಟೆಗೆ ಬೆದರಿಕೆ ಹಾಕುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ, ನೌಕಾಂಗಣ ಮತ್ತು ಐಎನ್ ಎಸ್ ವಿಕ್ರಾಂತ್ ನ್ನು ನಾಶಪಡಿಸುವ ಬೆದರಿಕೆಯನ್ನು ಇಮೇಲ್ ಮೂಲಕ ಕಳಿಸಲಾಗಿತ್ತು. ಆರಂಭದ ಇ-ಮೇಲ್ ಸಂದೇಶದ ತನಿಖೆ ನಡೆಯುತ್ತಿರುವಂತೆ ಮತ್ತೊಂದು ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries