HEALTH TIPS

ಅಡಕೆ ಕಳವುಗೈದ ಆರೋಪದಲ್ಲಿ ಯುವಕನಿಗೆ ಥಳಿಸಿ ಎಡವಟ್ಟುಮಾಡಿಕೊಂಡ ಪೊಲೀಸರು!-ವಿಚಾರಣೆ ನಂತರ ನೈಜ ಆರೋಪಿಗಳನ್ನು ಬಂಧನ

ಬದಿಯಡ್ಕ: ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ನಿರಪರಾಧಿ ಯುವಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನಿಗೆ ಥಳಿಸಿ, ಅಡಕೆ ಕಳವುಗೈದಿರುವ ಬಗ್ಗೆ ಬಾಯಿಬಿಡುವಂತೆ ಒತ್ತಾಯಿಸಿದ ಘಟನೆ ಬದಿಯಡ್ಕ ಠಾಣೆಯಲ್ಲಿ ನಡೆದಿದೆ. ನಂತರ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ.


ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆ ಪಂಚಾಯಿತಿ ಏತಡ್ಕ ನಿವಾಸಿ ಇಬ್ರಾಹಿಂ ಎಂಬವವರ ಮನೆಯ ಸಮೀಪವಿದ್ದ ಸೋಲಾರ್ ಡ್ರೈಯರ್‍ನಲ್ಲಿ ಒಣಗಲು ಹಾಕಿದ್ದ ಅಡಕೆ ಜುಲೈ 2 ಮತ್ತು ಜುಲೈ 3 ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಕಳವಾಗಿತ್ತು. ಈ ಕುರಿತು ಇಬ್ರಾಹಿಂ ದೂರು ನೀಡಿದ್ದು, ಇದಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ಫೂಟೇಜ್ ಒದಗಿಸಿದ್ದರು. ಇದರಲ್ಲಿದ್ದ ವ್ಯಕ್ತಿಗೆ ಹೋಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಏತಡ್ಕ ಆಸುಪಾಸಿನ ಅಜಿತ್ ಎಂಬವರನ್ನು ಠಾಣೆಗೆ ಕರೆಸಿ ಥಳಿಸಿ ಬಾಯ್ಬಿಡಿಸಲು ಪೊಲೀಸರು ಯತ್ನಿಸಿದ್ದಾರೆ!

ಆದರೆ ಅಡಕೆ ಕಳವುಗೈದ ನಿಜವಾದ ಆರೋಪಿಗಳನ್ನು ನಂತರ ಪತ್ತೆಹಚ್ಚಲಾಗಿದ್ದು, ಅಜಿತ್ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಕಿನ್ನಿಂಗಾರ್ ಕೈಪ್ಪಮಂಗಳ ನಿವಾಸಿ ಕೆ. ಗಣೇಶ್ (29), ಗುತ್ತಿಯಡ್ಕ ನಿವಾಸಿಗಳಾದ ಶಿಶಿರ್ ಕುಮಾರ್ (19) ಮತ್ತು ಸತೀಶ್ ಕುಮಾರ್ (31) ಬಂಧಿತರು. ಬದಿಯಡ್ಕ ಪೆÇಲೀಸ್ ಇನ್ಸ್‍ಪೆಕ್ಟರ್ ಅನೂಪ್ ಕೃಷ್ಣ ಆರ್.ಪಿ. ಅವರ ನೇತೃತ್ವದಲ್ಲಿ, ಎಸ್‍ಐ ರೂಪೇಶ್, ಎಎಸ್‍ಐ ಪ್ರಸಾದ್, ಸೀನಿಯರ್ ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಗೋಕುಲ್ ಮತ್ತು ಶ್ರೀನೇಶ್ ಅವರನ್ನೊಳಗೊಂಡ ಪೆÇಲೀಸ್ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನುಬಂಧಿಸಿದ್ದಾರೆ.

ತನ್ನದಲ್ಲದ ತಪ್ಪಿಗೆ ಪೊಲೀಸರಿಂದ ಒದೆ ತಿನ್ನಬೇಕಾದ ಪರಿಸ್ಥಿತಿ ಬಗ್ಗೆ ಅಜಿತ್ ಮರುಗುವ ಸ್ಥಿತಿ ನಿರ್ಮಾಣವಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries