HEALTH TIPS

ಸಮುದ್ರ ಕಿನಾರೆಯಲ್ಲಿ ರುಂಡವಿಲ್ಲದ ಗಂಡಸಿನ ಮೃತದೇಹ ಪತ್ತೆ: ನಿಗೂಢತೆ, ಸಮಗ್ರ ತನಿಖೆ ಆರಂಭ

 ಕಾಸರಗೋಡು: ನೆಲ್ಲಿಕುಂಜೆ ಕಸಬಾ ಕಡಪ್ಪುರ ಲೈಟ್‍ಹೌಸ್ ಸನಿಹ ಸಮುದ್ರ ದಡದಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಅಪರಿಚಿತ ಪುರುಷ ಮೃತದೇಹ  ಪತ್ತೆಯಾಗಿದೆ. ಮೃತದೇಹ ನಗ್ನವಾಗಿ ಕವುಚಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ ಮೀನುಕಾರ್ಮಿಕರು ಮೃತದೇಹ ಕಂಡು ನಗರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಒಂದೂವರೆ ತಿಂಗಳ ಹಿಂದೆ ವ್ಯಕ್ತಿ ಮೃತಪಟ್ಟರಬೇಕೆಂದು ಪೆÇಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.  ಮೃತದೇಹದಲ್ಲಿ ರುಂಡವಿಲ್ಲದಿರುವುದು ನಿಗೂಢತೆಗೆ ಕಾರಣವಾಗಿದೆ. ಮೃತದೇಹವನ್ನು ಮೀನುಗಳು ಹಾಗೂ ಜಲಚರಗಳು ತಿನ್ನಬಹುದಾಗಿದ್ದರೂ, ದೇಹದಿಂದ ರುಂಡ ಬೇರ್ಪಡಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಐಪಡುತ್ತಾರೆ. ಮಂಗಳೂರು ಭಾಗದಿಂದ ಮೃತದೇಹ ಸಮುದ್ರದ ನೀರಲ್ಲಿ ತೇಲಿ ಬಂದು ಇಲ್ಲಿ ದಡ ಸೇರಿರುವ ಸಾಧ್ಯದಿದೆ ಎಂದು ಪೆÇಲೀಸರು ತಿಳಿಸುತ್ತಾರೆ. ಮೃತದೇಹ ಕಾಣಲು ಭಾರೀ ಸಂಖ್ಯೆಯಲ್ಲಿ ಜನರು ಒಟ್ಟುಸೇರಿದ್ದರು. ಮೃತದೇಹ ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಶವಮಹಜರು ಪರೀಕ್ಷೆ ನಂತರ ಸಾವಿನ ಬಗ್ಗೆ ಮಾಹಿತಿ ಲಭ್ಯವಾಗಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries