ನವದೆಹಲಿ: ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶುಕ್ರವಾರ ನಗರದಲ್ಲಿ ಶಿರೋಮಣಿ ಅಕಾಲಿ ದಳದವರು (ಎಸ್ಎಡಿ) ನಡೆಸಿದ ಪ್ರತಿಭಟನೆಯಿಂದಾಗಿ ಟುಟಿಯನ್ಸ್ ಮತ್ತು ಐಟಿಒ ಸೇರಿದಂತೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಲವು ಭಾಗಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.
ದೆಹಲಿ ಸಂಚಾರಿ ಪೊಲೀಸರು ಸಂಚಾರ ತೊಂದರೆ ಇರುವ ಪ್ರದೇಶಗಳ ಬಗ್ಗೆ ಪ್ರಯಾಣಿಕರಿಗೆ ಸೂಚನೆಗಳನ್ನಿ ನೀಡಿ, ಪರ್ಯಾಯ ಮಾರ್ಗ ಬಳಕಗೆ ಮನವಿ ಮಾಡಿದ್ದಾರೆ
ದೆಹಲಿಯ ಹೃದಯ ಭಾಗ, ಧೌಲಾ ಕುವಾನ್, ಐಟಿಒ, ವಿಕಾಸ್ ಮಾರ್ಗ, ದೆಹಲಿ ಗೇಟ್, ಕರೋಲ್ ಬಾಗ್ ಪ್ರದೇಶಗಳಿಂದ ಹೆಚ್ಚು ಕರೆಗಳು ಬಂದಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.


