HEALTH TIPS

ಲೈಫ್ ಯೋಜನೆಯಡಿಯಲ್ಲಿ ಮಂಜೂರಾದ ನಿರ್ಗತಿಕ ಕುಟುಂಬದ ಮನೆಗೆ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿರುವುದಾಗಿ ಆರೋಪ

  

                 ಮಂಜೇಶ್ವರ:  ಲೈಫ್ ಯೋಜನೆಯಡಿಯಲ್ಲಿ ಸರ್ಕಾರದ ಅನುದಾನದಿಂದ ನಿರ್ಗತಿಕ ಕುಟಂಬವೊಂದಕ್ಕೆ ನಿರ್ಮಿಸಲಾದ ಮನೆಗೆ ಬೇಕಾಗಿರುವ ಎಲ್ಲಾ ದಾಖಲು ಪತ್ರಗಳನ್ನು ಹಾಜರು ಪಡಿಸಿ ಅದರ ಶುಲ್ಕವನ್ನು ಪಾವತಿಸಿ ದೃಢೀಕರಣದ ಸಂದೇಶ ತಲುಪಿ ಎರಡು ತಿಂಗಳುಗಳು ಕಳೆದರೂ  ಕೇರಳ ವಿದ್ಯುತ್ ಇಲಾಖೆಯ ಮಂಜೇಶ್ವರ ಸೆಕ್ಷನ್ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ನೀಡಲು ಸತಾಯಿಸುತ್ತಿರುವುದಾಗಿ ಬಿಪಿಎಲ್ ಕಾರ್ಡುದಾರರಾಗಿರುವ ನಿರ್ಗತಿಕ ಕುಟುಂಬವೊಂದು ಆರೋಪಿಸಿದೆ.

                    ಕುಂಜತ್ತೂರು ನಿವಾಸಿ ಸಯ್ಯದ್ ಎಂಬವರು ತನ್ನ ಸಹೋದರ ಕುಂಜತ್ತೂರು ಚಕ್ರತೀರ್ಥ ಎಂಬಲ್ಲಿ ದಾನವಾಗಿ ನೀಡಿದ 6 ಸೆಂಟ್ಸ್ ಸ್ಥಳದಲ್ಲಿ ಕೇರಳ ಸರ್ಕಾರದ ಲೈಫ್ ಯೋಜನೆಯಡಿಯಲ್ಲಿ  ಮಂಜೂರಾದ 4 ಲಕ್ಷ ರೂ. ನಿಂದ ಮೊದಲ ಹಂತವಾಗಿ ಲಭಿಸಿದ ಮೂರು ಲಕ್ಷ ರೂ. ನಿಂದ ಮನೆ ನಿರ್ಮಾಣಗೊಳಿಸಿ ಪಂ. ವತಿಯಿಂದ ಮನೆ ನಂಬ್ರ ಲಭಿಸಿದ ಬಳಿಕ ಎಲ್ಲಾ ದಾಖಲಾತಿಗಳೊಂದಿಗೆ ವಿದ್ಯುತ್ ಸಂಪಕ್ರ್ಕಾಗಿ ಅರ್ಜಿ ಸಲ್ಲಿಸಿ ಜೊತೆಯಾಗಿ ಅದರ ಶುಲ್ಕವನ್ನು ಪಾವತಿಸಿ ಸುಮಾರು ಎರಡು ತಿಂಗಳು ಹತ್ತಿರವಾಗುತಿದ್ದರೂ ಈ ತನಕ ಯಾರೂ ಇತ್ತ ತಿರುಗಿಯೂ ನೋಡಲಿಲ್ಲವೆಂಬುದಾಗಿ ಸಯ್ಯದ್ ಕುಟುಂಬ ಆರೋಪಿಸುತ್ತಿದೆ.   

               ಬಿಪಿಎಲ್ ಕಾರ್ಡುದಾರರಾಗಿರುವ ಸಯ್ಯದ್ ಕುಟುಂಬಕ್ಕೆ ಸರ್ಕಾರದಿಂದ ಮಂಜೂರುಗೊಂಡ ಮೊತ್ತದಿಂದ ಇನ್ನೂ ಒಂದು ಲಕ್ಷ ರೂ. ಲಭಿಸಲು ಬಾಕಿ ಇದೆ. ಆದರೆ ಅದು ಲಭಿಸಬೇಕಾದರೆ ಮನೆ ನಿರ್ಮಾಣ ಪೂರ್ಣಗೊಂಡು ವಿದ್ಯುತ್ ಸಂಪರ್ಕ ಲಭಿಸಿದ ಬಳಿಕವೇ ಸಿಗಲಿದೆ. ಆ ಮೊತ್ತವನ್ನು ಕುಟುಂಬದವರಿಂದಲೂ ಸ್ನೇಹತರಿಂದಲೂ ಸಾಲ ರೂಪದಲ್ಲಿ ಪಡದು ಸರ್ಕಾರದ ಹಣ  ಲಭಿಸಿದ ಕೂಡಲೇ ಹಿಂತಿರುಗಿಸುವ ಭರವಸೆಯಲ್ಲಿ ಪಡೆಯಲಾಗಿದ್ದು, ಇದೀಗ ವಿದ್ಯುತ್ ಇಲಾಖೆಯವರಿಗೆ ಬೇಕಾದ ಎಲ್ಲಾ ಪುರಾವೆಗಳನ್ನು ಕೂಡಾ ತಾನು ಸಮರ್ಪಿಸಿದ್ದರೂ ನನಗೆ ಸಂಪರ್ಕ ನೀಡದೆ ಸತಾಯಿಸುತ್ತಿರುವುದು ಹಲವು ರೀತಿಯ ಸಂಶಯಗಳಿಗೆ ಕಾರಣವಾಗುತ್ತಿರುವುದಾಗಿ ಸಯ್ಯದ್ ಹೇಳುತ್ತಿದ್ದಾರೆ.

              ಮದ್ಯವರ್ತಿಗಳ ಜೇಬು ತುಂಬಿಸದೇ ಇದ್ದದ್ದು ಈ ರೀತಿಯ ವಿಳಂಭಕ್ಕೆ ಕಾರಣವಗಿರಬಹುದಾಗಿ ಶಂಕೆಯನ್ನು ವ್ಯಕ್ತಪಡಿಸಿರುವ ಈ ಕುಟುಂಬ  ತಿಳಿದಷ್ಟು ಮಟ್ಟಿಗೆ ವಿದ್ಯುತ್ ಇಲಾಖೆಯ ಪ್ರತಿಯೊಂದು ಕೆಲಸವೂ ಮದ್ಯವರ್ತಿಗಳೊಂದಿಗೆ ನಡೆಯುತ್ತಿರುವುದು ಮಂಜೇಶ್ವರದ ಜನತೆಗೊಂದು ಶಾಪವಾಗಿ ಪರಿಣಮಿಸಿದೆ. ಈ ಬಗ್ಗೆ ಈಗಾಗಲೇ ವಿದ್ಯುತ್ ಸಚಿವರಿಗೆ ಪತ್ರವನ್ನು ರವಾನಿಸಿರುವುದಾಗಿ ಸಯ್ಯದ್ ಪ್ರತಿಕ್ರಿಯಿಸಿದ್ದಾರೆ. ಯಾವ ಕಾರಣಕ್ಕೆ ವಿದ್ಯುತ್ ಅಧಿಕಾರಿಗಳು ತನ್ನನ್ನು ಈ ರೀತಿ ಸತಯಿಸುತಿದ್ದಾರೆ ಈ ಬಗ್ಗೆ ಮಾಹಿತಿ ಹಕ್ಕು ಖಾಯಿದೆಯ ಪ್ರಕಾರವೂ ಮಾಹಿತಿಯನ್ನು ಪಡ್ದಾರೆಯಲಿರುವುದಾಗಿ ಅವರು ತಿಳಿಸಿದ್ದಾರೆ.

                 ಒಂದು ವಾರದೊಳಗೆ ಎಲ್ಲರಿಗೂ ರೇಶನ್ ಹಾಗೂ ವಿದ್ಯುತ್ ನೀಡುವುದಾಗಿ ಸರ್ಕಾರದ ಘೋಷಣೆಯಿರುವಾಗ ಸೆಕ್ಷನ್ ಅಧಿಕಾರಿಗಳು ಇದಕ್ಕೆ ತದ್ವಿರುದ್ದವಾಗಿ ವರ್ತಿಸಿ ಬಡಜನತೆಯ ತಾಳ್ಮೆ ಪರೀಕ್ಷಿಸುತ್ತಿರುವುದಾಗಿ ಕುಟುಂಬ ಪ್ರತಿಕ್ರಿಯಿಸಿದೆ.  ಇನ್ನೂ ವಿದ್ಯುತ್ ಸಂಪರ್ಕ ವಿಳಂಭವಾದರೆ ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿ ಮುಂಭಾಗದಲ್ಲಿ ಕುಟುಂಬದೊಂದಿಗೆ  ಉಪವಾಸ ಸತ್ಯಾಗ್ರಹ ನಡೆಸಲಿರುವುದಾಗಿ ಸಯ್ಯದ್  ತಿಳಿಸಿದ್ದಾರೆ. 

           ಈ ಬಗ್ಗೆ ವಿದ್ಯುತ್ ಇಲಾಖೆಯ ಅಧಿಕೃತರನ್ನು ಸಮರಸ ಸುದ್ದಿ ಸಂಪರ್ಕಿಸಲು ಬಯಸಿದರೂ ಸಬೂಬು ನೀಡಿ ತಪ್ಪಿಸಿಕೊಂಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries