ಮಂಜೇಶ್ವರ: ಕೇರಳದ ವಳಾಂಜೇರಿಯಿಂದ ಲಡಾಕಿಗೆ ಕಾಲ್ನಡಿಗೆ ಮೂಲಕ ಯಾತ್ರೆ ಆರಂಭಿಸಿದ ಸೈನಿಕನಾಗಿರುವ ವಲಯಂ ಕಾಟಿಲ್ ಅಬ್ಬಾಸ್ (34) ಹಾಗೂ ಪತ್ನಿ ಶಾಯಿನಾ (25) ಎಂಬಿವರು ಕೇರಳ ಕರ್ನಾಟಕ ಗಡಿ ಪ್ರದೇಶ ತಲುಪುತಿದ್ದಂತೆಯೇತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿg Àುವ ಇಲ್ಯಾಸ್ ತೂಮಿನಾಡು ಇವರ ಮುಂದಾಳತ್ವದಲ್ಲಿ ಅದ್ದೂರಿಯ ಸ್ವಾಗತವನ್ನು ನೀಡಲಾಯಿತು. ಈ ಸಂದರ್ಭ ಕ್ಲಬ್ ಸದಸ್ಯರು ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರುಗಳು ಉಪಸ್ಥ್ಥಿತರಿದ್ದರು. ಉದ್ಯಾವರ ಮಾಡ, ಮಂಜೇಶ್ವರ ಮೊದಲಾದೆಡೆಯೂ ಸ್ವಾಗತ ನೀಡಲಾಯಿತು.
ದಿನÀವೊಂದರಲ್ಲಿ 25 ಕಿಲೋ ಮೀಟರ್ ನಡೆಯುವ ಇವರು 3600É. ಕಿಮೀ ಲಡಾಕ್ ತನಕ ಕಾಲ್ನಡಿಗೆಯಲ್ಲೇ ತಲುಪಲಿದ್ದಾರೆ.ಕಾರ್ಗಿಲ್ ನಲ್ಲಿ ಯಾತ್ರೆಯನ್ನು ಕೊನೆಗೊಳಿಸಲು ಆಲೋಚಿಸುತ್ತಿರುವುದಾಗಿ ಸೈನಿಕ ದಂಪತಿಗಳು ತಿಳಿಸಿದ್ದಾರೆ.
ಕಣ್ಣೂರಿನ ಯುದ್ದ ಸ್ಮಾರಕ ಭೂಮಿ ಪರಿಸರದಲ್ಲಿ ಪುಷ್ಪಾರ್ಚಣೆ ನಡೆಸಿ ಸೆಪ್ಟಂಬರ್ 1 ಬೆಳಿಗ್ಗೆ 11 ಗಂಟೆಗೆ ಕಣ್ಣೂರಿನ ವಳಯಾಂಚೇರಿಯಿಂದ ಆರಂಭಗೊಂಡ ಯಾತ್ರೆ ಸೆಪ್ಟಂಬರ್ 14 ಕ್ಕೆ ಕೇರಳ ಕರ್ನಾಟಕ ಗಡಿಯಾದ ತೂಮಿನಾಡಿಗೆ ತಲುಪಿದೆ. ಲಡಾಕ್ ತಲುಪಲು ಕನಿಷ್ಟ ಮೂರು ತಿಂಗಳು ಬೇಕಾಬಹುದೆಂದು ಅಂದಾಜಿಸಲಾಗಿದೆ. ಕೇರಳದುದ್ದಕ್ಕೂ ಎಲ್ಲಾ ಸ್ಥಳಗಳಲ್ಲಿಯೂ ಜನರು ಉತ್ತಮವಾದ ರೀತಿಯಲ್ಲಿ ಸ್ವಾಗತಿಸಿರುವುದಾಗಿ ಸೈನಿಕ ದಂಪತಿ ತಿಳಿಸಿದೆ.


