ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ವತಿಯಿಂದ ಹಿರಿಯ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಟನೆ ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಮೇ 22ರಂದು ಕುಂಬಳೆ ಸನಿಹದ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿರುವುದು.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾಸಭೆ ಶಾಲೆಯಲ್ಲಿ ಭಾನುವಾರ ಜರುಗಿತು. ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಪಂ ಸದಸ್ಯೆ ಸುಲೋಚನಾ, ಪ್ರೊ. ಎ.ಶ್ರೀನಾಥ್, ವಕೀಲ ಥಾಮಸ್ ಡಿ.ಸೋಜ, ಶಾಲಾ ಮುಖ್ಯ ಶಿಕ್ಷಕಿ ಸ್ಮಿತಾ, ಸಂಘಟನೆ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ, ರವಿ ನಾಯ್ಕಾಪು, ಸುಧಾಮ ಗೋಸಾಡ, ಮುರಳೀಧರ ಯಾದವ್, ಅರುಣಾ ಕುಮಾರಿ, ವಿ.ಜಿ ಕಾಸರಗೋಡು, ಹರೀಶ್ ಗೋಸಾಡ, ಅಖಿಲೇಶ್ ನಗುಮುಗಂ, ಜಯಾನಂದ ಹೊಸದುರ್ಗ, ಐತ್ತಪ್ಪ ಮೂಲ್ಯ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಜಯದೇವ ಖಂಡಿಗೆ ಅವರು ಗೌರವಾಧ್ಯಕ್ಷ ಹಾಗೂ ಮುರಳೀಧರ ಯಾದವ್ ಅಧ್ಯಕ್ಷರಾಗಿರುವ ಸ್ವಾಗತ ಸಮಿತಿ ರಚಿಸಲಾಯಿತು. 22ರಂದು ಬೆಳಗ್ಗೆ ನಾರಾಯಣಮಂಗಲ ಶ್ರೀಗಣೇಶ ಮಂದಿರ ವಠಾರದಿಂದ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು ಹಾಗೂ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಪದಾಧಿಕಾರಿಗಳನ್ನೊಳಗೊಂಡ ಬೃಹತ್ ಮೆರವಣಿಗೆ ಶಾಲೆ ವರೆಗೆ ನಡೆಯುವುದು. ನಂತರ ಉದ್ಘಾಟನೆ, ದತ್ತಿನಿಧಿ ಪ್ರಶಸ್ತಿ ಪ್ರದಾನ, ದಾಸ ಸಂಕೀರ್ತನೆ, ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮ ವೈವಿಧ್ಯ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು. ರವಿ ನಾಯ್ಕಾಪು ಸ್ವಾಗತಿಸಿದರು. ಸಂಘಟನೆ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ವಂದಿಸಿದರು.


