ಕಾಸರಗೋಡು: ಅಪರಿಮಿತ ಬೆಲೆ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕೃತರು ಹೋಟೆಲ್ ಗಳಿಗೆ ಹಠಾತ್ ಧಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಹನ್ನೊಂದು ಹೋಟೆಲ್‍ಗಳಲ್ಲಿ ಪರಿಶೀಲಿಸಲಾಗಿದೆ. ಸ್ಪೆಷಲ್ ಟೀ ಹೆಸರಲ್ಲಿ ಕೆಲ ಹೋಟೆಲ್ ಗಳಲ್ಲಿ ಟೀಗೆ 20 ರೂಪಾಯಿ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಪರಿಶೀಲನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಶೀಲನೆ ಮುಂದುವರಿಯಲಿದೆ.
ಕಾಸರಗೋಡು ಮತ್ತು ಮಂಜೇಶ್ವರ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಯಿತು. ಜಿಲ್ಲಾ ಪ್ರಭಾರ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು, ಮಂಜೇಶ್ವರ ತಾಲೂಕು ಸರಬರಾಜು ಅಧಿಕಾರಿ ಸಜಿಮೋನ್, ಪಡಿತರ ನಿರೀಕ್ಷಕರಾದ ಪಿ.ವಿ.ಶ್ರೀನಿವಾಸನ್, ಸಂಜಯ್, ಸುರೇಶ್ ನಾಯ್ಕ್ ತಪಾಸಣಾ ದಳದಲ್ಲಿ ಉಪಸ್ಥಿತರಿದ್ದರು. ಚಹಾಕ್ಕೆ 12 ರಿಂದ 20 ರೂ.ವರೆಗೆ ಬೆಲೆ ಇರುವುದು ಕಂಡುಬಂದಿದೆ. 20 ರೂಪಾಯಿ ಶುಲ್ಕ ವಿಧಿಸುವುದು ವಿಶೇಷ(ಸ್ಪೆಶಲ್) ಚಹಾ ಎಂಬ ಹೆಸರಲ್ಲಾಗಿದೆ. ಚಹಾದ ಬೆಲೆ ಇಳಿಕೆ ಮಾಡುವಂತೆ ಸ್ಕ್ವಾಡ್ ಸೂಚಿಸಿದೆ.


