ಮಂಜೇಶ್ವರ: ಜನಮೈತ್ರಿ ಪೋಲೀಸ್ ನಾಟಕ ತಂಡ ತಿರುವನಂತಪುರ ಮತ್ತು ಜನಮೈತ್ರಿ ಪೋಲಿಸ್ ಮಂಜೇಶ್ವರದ ಸಹಭಾಗಿತ್ವದಲ್ಲಿ ಸಮೂಹ ಮಾಧ್ಯಮ ಗಳ ಬಳಕೆಯ ಕುರಿತ ಜನಜಾಗೃತಿ ಮೂಡಿಸುವ 'ತೀ ಕಳಿ'(ಬೆಂಕಿಯಾಟ) ಎಂಬ ನಾಟಕವು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಪ್ರದರ್ಶಿಸಲ್ಪಟ್ಟಿತು. ಪೋಲಿಸರೇ ಪಾತ್ರಧಾರಿಗಳಾಗಿ ಅಭಿನಯಿಸಿದ ಈ ನಾಟಕವು ಮಕ್ಕಳ ಮನಸ್ಸನ್ನು ಆಕರ್ಷಿಸಿತು.
ಕಾಸರಗೋಡು ಜಿಲ್ಲೆಯಲ್ಲಿ ಆಯ್ದ ಏಳು ಶಾಲೆಗಳಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದ್ದು ಕುಂಜತ್ತೂರು ಶಾಲೆಯಲ್ಲಿ ನಡೆದ ನಾಟಕದ ಆರನೇ ಪ್ರದರ್ಶನದ ಔಪಚಾರಿಕ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ.ಕೆ.,ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯೋಗಿಶ ಕೆ.ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ., ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹೆಮಾನ್ ಉದ್ಯಾವರ, ಶಾಲಾ ಹಿರಿಯ ಶಿಕ್ಷಕಿ ಲಲಿತಾ, ಶಿಕ್ಷಕಿ ಅಮಿತಾ ಶುಭಾಶಂಸನೆಗೈದರು. ಮಂಜೇಶ್ವರ ಜನಮೈತ್ರಿ ಪೋಲಿಸ್ ಅಧಿಕಾರಿ ಮಧು ಸ್ವಾಗತಿಸಿ,ಶಿಕ್ಷಕಿ ಅನಿತಾ ವಂದಿಸಿದರು.




