ಕುಂಬಳೆ: ಕೆನಡಾ ರೀಜೆನ್ಸಿ ಇಂಟರ್‍ನ್ಯಾಶನಲ್ ಥಿಯಾಲಾಜಿಕಲ್ ಕಾಲೇಜಿನ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಸಾಮಾಜಿಕ ಧಾರ್ಮಿಕ ಯುವ ನಾಯಕ ದಾನಿ ಡಾ.ಹರೀಶ್ ಬೊಟ್ಟಾರಿಯವರಿಗೆ ಊರ ಪೌರ ಸಮ್ಮಾನ ಕಾರ್ಯಕ್ರಮವು ಅ.28ರಂದು ಚೇವಾರು ಶಾಲೆಯಲ್ಲಿ ಜರಗಲಿರುವುದು. ಅಂದು ಬೆಳಗ್ಗೆ 9 ರಿಂದ ಜರಗಲಿರುವ ಕಾರ್ಯಕ್ರಮವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿರುವರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಲಿರುವರು. ಸಯ್ಯದ್ ಹಾದಿ ತಂಙಳ್ ಮೊಗ್ರಾಲ್,ವಂದನೀಯ ಮೆಲ್ವಿನ್ ಫೆರ್ನಾಂಡಿಸ್ ಪೆರ್ಮುದೆ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು,ಎಸ್ ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಂಸನೆಗೈಯ್ಯಲಿರುವರು.ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ.ಜಯಂತಿ ಅಧ್ಯಕ್ಷತೆ ವಹಿಸಲಿರುವರು.
ಪ್ರಮುಖರಾದ ಗೋಲ್ಡನ್ ರಹಿಮಾನ್,ಫಾತಿಮತ್ ಝುಹರಾ,ರಾಜೀವಿ ಶೆಟ್ಟಿಗಾರ್,ಬಿ ವಿ ರಾಜನ್,ಎಂ.ಶಂಕರ ರೈ ಮಾಸ್ತರ್, ಪಿ ಪ್ರಮೋದ್,ಬಿ.ಶಂಕರನಾರಾಯಣ ಭಟ್,ಯು.ಶ್ಯಾಮ ಭಟ್, ಗಂಗಾಧರ ತೆಕ್ಕೆಮೂಲೆ,ಎಂ ಎಂ ಭಟ್ ಮಾಣಿ,ಬಿಎ ಬಶೀರ್ ಉಪಸ್ಥಿತಲಿರುವರು.ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್,ರಾಜ್ಯಪ್ರಶಸ್ತಿ ವಿಜೇತ ಚೇವಾರು ಶಂಕರ ಕಾಮತ್,ಸಮಾಜ ಸೇವಕ ಡಾ.ಅಬೂಬಕ್ಕರ್ ಲೆಂಕಿರಿಯಡ್ಕ,ಡಾ.ಆಶಲತಾ ಚೇವಾರು,ಡಾ.ಜೋತ್ಸ್ನಾ ಗೋಪಿನಾಥನ್,ಡಾ.ಯೋಗಿಶ್ ಮಂಡೆಕಾಪು,ಕು.ಶ್ರದ್ಧಾ ನಾಯಪ್ರ್ಪಳ್ಳ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಮಗಳು ಜರಗಲಿರುವುದು.
ಅ.28 ರಂದು ಡಾ.ಹರೀಶ್ ಬೊಟ್ಟಾರಿಯವರಿಗೆ ಊರ ಪೌರ ಸಮ್ಮಾನ
0
ಆಗಸ್ಟ್ 27, 2022

