ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ರೈತರ ಪ್ರಗತಿಗಾಗಿ ಜಿಲ್ಲೆಯಲ್ಲಿ 11ನೇ ಕೃಷಿ ಗಣತಿಯನ್ನು ಆರಂಭಿಸಲಾಗಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ನಿರ್ದೇಶಾನುಸಾರ ಕೃಷಿ ಗಣತಿಯನ್ನು ಆರ್ಥಿಕ ಸ್ಥಿತಿ ಮತ್ತು ಅಂಕಿಅಂಶಗಳ ಇಲಾಖೆಯ ನೇತೃತ್ವದಲ್ಲಿ ಗಣತಿ ನಡೆಸಲಾಗುತ್ತದೆ.
ಸಂಗ್ರಹಿಸಿದ ಕೃಷಿ ಗಣತಿಯ ಆಧಾರದಲ್ಲಿ ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸಲು, ಸಾಮಾಜಿಕ-ಆರ್ಥಿಕ ನೀತಿಗಳನ್ನು ರೂಪಿಸಲು ಮತ್ತು ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಬಳಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದೂ ಅಧ್ಯಯನದ ಉದ್ದೇಶವಾಗಿದೆ. ದೇಶದ ಕೃಷಿ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಸಿದ್ಧಪಡಿಸಲು, ರಾಜ್ಯ, ಸ್ಥಳೀಯಾಡಳಿತ ಸಂಸ್ಥೆ ಮಟ್ಟದಲ್ಲಿ ಕೆಲವೊಂದು ಯೋಜನೆ ಜಾರಿಗೆ ಕೃಷಿ ಗಣತಿ ಮಾಹಿತಿಯನ್ನು ಮಾನದಂಡವಾಗಿ ಬಳಸಿಕೊಳ್ಳಲಾಗುತ್ತದೆ.
ಕೃಷಿ ಗಣತಿ ಸಮೀಕ್ಷೆಗೆ ಆರ್ಥಿಕ ಸಾಂಖ್ಯಿಕ ಇಲಾಖೆಯ ಸಿಬ್ಬಂದಿಗಳ ಉಸ್ತುವಾರಿಯಲ್ಲಿ ಗಣತಿದಾರರನ್ನು ನೇಮಿಸಿಕೊಳ್ಳಲಾಗಿದೆ. ಗಣತಿದಾರರು ಪ್ರತಿ ಮನೆ ಮತ್ತು ಸಂಸ್ಥೆಗಳಿಂದ ಹಿಡುವಳಿ ಜಮೀನು, ಇಲ್ಲ ನಡೆಸುತ್ತಿರುವ ಕೃಷಿ ಗಣತಿಯನ್ನು ಮೂರು ಹಂತಗಳಲ್ಲಿ ನಡೆಸುತ್ತಿದ್ದಾರೆ.. ಮೊದಲ ಹಂತದಲ್ಲಿವಾರ್ಡ್ಗಳ ಮನೆ ಮತ್ತು ಸಂಸ್ಥೆಗಳಿಗೆ ಭೇಟಿ ನೀಡಿ ಆಯಾ ವಾರ್ಡ್ನಲ್ಲಿ ಕೃಷಿ ಭೂಮಿ ಹೊಂದಿರುವ ರೈತರ ಮಾಹಿತಿ ಮತ್ತು ಜಾಗದ ಮಾಹಿತಿಸ ಂಗ್ರಹಿಸುವರು. ಅನುಭವ, ಸಾಮಾಜಿಕ ವರ್ಗ, ಮಾಲೀಕತ್ವ ಇತ್ಯಾದಿಗಳಾಗಿ ವರ್ಗೀಕರಿಸಲಾಗುತ್ತದೆ. ಎರಡನೇ ಹಂತದಲ್ಲಿ ಸಂಪೂರ್ಣ ವಾರ್ಡ್ಗಳಲ್ಲಿ ಶೇ.20 ಮಾದರಿ ವಾರ್ಡ್ಗಳಿಂದ, ಆಯ್ದ ಭೂಮಾಲೀಕರಿಂದ ಕೃಷಿ ಪದ್ಧತಿ ಮತ್ತು ನೀರಾವರಿ ಕುರಿತಾದ ಮಾಹಿತಿ ಸಂಗ್ರಹಿಸಲಾಗುವುದು. ಮೂರನೇ ಹಂತದಲ್ಲಿ ಶೇ.7ರಷ್ಟು ಮಾದರಿ ವಾರ್ಡ್ಗಳಿಂದ ಆಯ್ಕೆಯಾದ ಭೂ ಮಾಲೀಕರಿಂದ ಕೃಷಿಗೆ ಬಳಸುವ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ನೀರಾವರಿ ಉಪಕರಣಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಮತ್ತು ಮೂರನೇ ಹಂತಗಳು ಮುಮದಿನ ವರ್ಷವೂ ಮುಂದುವರಿಯಲಿದೆ.
ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ-ಜಿಲ್ಲೆಯಲ್ಲಿ ಕೃಷಿ ಗಣತಿಗೆ ಚಾಲನೆ
0
ಜನವರಿ 19, 2023
Tags

