ಪೆರ್ಲ: ರಾಜಾಪುರ ಸಾರಸ್ವತ ಸಂಘ ಕಾಸರಗೋಡು ಹಾಗೂ ಬಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಇಂದು(ಜ.15ಕ್ಕೆ) "ಸಾರಸ್ವತ ಸಂಗಮ- ಶತ ಸಂಭ್ರಮ" ಎಂಬ ಕಾರ್ಯಕ್ರಮ ಶೇಣಿ ಶ್ರೀಶಾರದಾಂಬ ಶಾಲಾ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇದರ ಅಂಗವಾಗಿ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಜರಗಲಿದೆ. ಸಮಾರಂಭವನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪುಣಚ ಉದ್ಘಾಟಿಸುವರು. ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಕುಂಡೇರಿ ಜಯಂತ ನಾಯಕ್ ಅಧ್ಯಕ್ಷತೆ ವಹಿಸುವರು. ಗೀತಾ ವಾಗ್ಲೆ ಬಂಟಕಲ್ಲು ದಿಕ್ಸೂಚಿ ಭಾಷಣಗೈಯುವರು.
ಬಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಆಜೇರು ಬಾಲಕೃಷ್ಣ ನಾಯಕ್, ರಾ.ಸಾ.ಸ.ಸೇ.ಸಂಘ ಪೈವಳಿಕೆಯ ಅಧ್ಯಕ್ಷ ಮನೋಹರ ನಾಯಕ್ ಕಂಪದಮೂಲೆ, ಮೊಗೇರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ನಾಯಕ್ ಆಳ್ಚಾರ್, ಶೇಣಿ ಶಾಲಾ ಪ್ರಬಂಧಕಿ ಶಾರದಾ ವೈ, ಸ್ವಾಗತ ಸಮಿತಿ ಅಧ್ಯಕ್ಷ ಮುಕುಂದ ನಾಯಕ್ ಶೇಣಿ ತೋಟದಮನೆ, ಆರ್.ಎಸ್.ಬಿ.ಯುವ ಸಂಘದ ಗೌರವಾಧ್ಯಕ್ಷ ರಘರಾಮ ಬೋರ್ಕರ್ ಶೇಣಿ, ಮುಗು ಶ್ರೀಸುಬ್ರಾಯ ಕ್ಷೇತ್ರ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ, ನಾರಾಯಣ ನಾಯಕ್ ಗುರುವಾರೆ, ಶ್ರೀಧರ ನಾಯಕ್ ಕುಕ್ಕಿಲ, ಕಮಲಾಕ್ಷ ನಾಯಕ್ ಕೇರಿಮೂಲೆ ಮೊದಲಾದವರು ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮದ ಬಳಿಕ ಕರಿಂಬಿಲ ಲಕ್ಷ್ಮಣ ಪ್ರಭು ನೇತೃತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ಜರಗಲಿದೆ.
ಇಂದು ಶೇಣಿಯಲ್ಲಿ ರಾಜಾಪುರ ಸಾರಸ್ವತ ಸಂಗಮ: ಶತ ಸಂಭ್ರಮ
0
ಜನವರಿ 15, 2023
Tags


