ಪಾಲಕ್ಕಾಡ್: ದೇವಾಲಯವನ್ನು ಕೆಡವಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಮಿಲಿಟರಿ ಕ್ಯಾಂಪ್ ಒಂದು ಪಾಲಕ್ಕಾಡ್‍ನಲ್ಲಿ ಪತ್ತೆಯಾಗಿದೆ. ಪಾಲಕ್ಕಾಡ್ ಕೂಟನಾಡ್ ನಲ್ಲಿ ಮಿಲಿಟರಿ ಅಡಗುದಾಟ ಕೇಂದ್ರ ಪತ್ತೆಹಚ್ಚಲಾಗಿದೆ.
ಕೇಂದ್ರ ಸಂಸ್ಕøತಿ ಇಲಾಖೆಯ ಹಿರಿಯ ಫೆಲೋ ಹಾಗೂ ಓರಲ್ ಹಿಸ್ಟರಿ ರಿಸರ್ಚ್ ಫೌಂಡೇಶನ್‍ನ ನಿರ್ದೇಶಕ ತಿರೂರ್ ದಿನೇಶ್ ಈ ಸಂಶೋಧನೆಯ ಹಿಂದಿದ್ದಾರೆ. ಮಿಲಿಟರಿ ಅಡಗುದಾಣ ಕಂಡುಬಂದ ಸ್ಥಳವು ಕೂಟನಾಡ್-ಗುರುವಾಯೂರ್ ರಸ್ತೆಯ ಸಮೀಪದಲ್ಲಿದೆ.
ಕೇಂದ್ರ ಸಂಸ್ಕೃತಿ ಇಲಾಖೆಗಾಗಿ ಭಾರತಪುಳದ ಎರಡೂ ದಡದ ಗ್ರಾಮಗಳ ಐತಿಹಾಸಿಕ ಸಂಕಲನದ ಭಾಗವಾಗಿ ನಡೆಸಿದ ಅಧ್ಯಯನದ ವೇಳೆ ಟಿಪ್ಪುವಿನ ಸೇನೆಯು ದೇವಾಲಯವನ್ನು ಕೆಡವಿ ನಿರ್ಮಿಸಿದ ಅಡಗುದಾಣ ಕಂಡುಹಿಡಿದಿದೆ. ಇಲ್ಲಿ ದೊಡ್ಡ ದೇವಾಲಯದ ಅವಶೇಷಗಳನ್ನು ಕಾಣಬಹುದು. ಸ್ಥಳದಲ್ಲಿ ದೇಗುಲದ ನೆಲ, ಅಶ್ವಶಾಲೆ, ಗೋಡೆಯ ಅವಶೇಷಗಳು, ಪ್ರಾಕಾರಗಳು ಮತ್ತು ಕಂದಕಗಳು ಕಂಡುಬಂದಿವೆ.
ಸುಮಾರು ಮೂರು ಎಕರೆ ಅರಣ್ಯ ಪ್ರದೇಶದಲ್ಲಿ ಸೇನೆಯ ಆಶ್ರಯ ಪತ್ತೆಯಾಗಿದೆ. ಟಿಪ್ಪುವಿನ ದೇಗುಲ ಯುದ್ಧದ ವೇಳೆ ದಾಳಿ ನಡೆಸಿ ಕೋಟೆಯಾಗಿ ಮಾರ್ಪಟ್ಟಿತ್ತು ಎಂದು ತಿರೂರು ದಿನೇಶ್ ಹೇಳಿದರು. ಕೂಟನಾಡು ಅಶ್ವಾಲಯ ಒಳಗೊಂಡ ದೊಡ್ಡ ದೇವಾಲಯವಾಗಿತ್ತು. ಟಿಪ್ಪು ಈ ಗೋಡೆಯ ನಾಲ್ಕೂ ಕಡೆಗಳಲ್ಲಿ ಫಿರಂಗಿಗಳನ್ನು ಇಡಲು ಕೊತ್ತಲಗಳನ್ನು ನಿರ್ಮಿಸಿದ. ಈ ವಿಷಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಗಮನಕ್ಕೆ ತರುವುದಾಗಿ ತಿರೂರು ದಿನೇಶ್ ತಿಳಿಸಿದ್ದಾರೆ.
ಪಾಲಕ್ಕಾಡ್ ನಲ್ಲಿ ಟಿಪ್ಪು ನಿರ್ಮಿಸಿದ ಮಿಲಿಟರಿ ಕ್ಯಾಂಪ್ ಪತ್ತೆ
0
ಫೆಬ್ರವರಿ 02, 2023


