ಕಾಸರಗೋಡು: ಪೊವ್ವಲ್ ಬೆಂಚ್‍ಕೋರ್ಟ್ ಸನಿಹದ ನಿವಾಸಿ, ರಫೀಕ್ ಎಂಬವರ ಮನೆಯಿಂದ ಕಳವಿಗೆ ಯತ್ನಿಸಿದ್ದು, ಈ ದೃಶ್ಯಾವಳಿಯನ್ನು ತನ್ನ ಮೊಬೈಲ್‍ಗೆ ಸಂರ್ಕಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಫೀಕ್ ತಿಂಗಳ ಹಿಂದೆ ಕುಟುಂಬ ಸಹಿತ ವಿದೇಶಕ್ಕೆ ತೆರಳಿದ್ದು, ಈ ಸಂದರ್ಭ ಸಿಸಿ ಕ್ಯಾಮರಾಕ್ಕೆ ತನ್ನ ಮೊಬೈಲ್‍ನಿಂದ ಸಂಪರ್ಕ ಕಲ್ಪಿಸಿದ್ದರು. ಈ ಮಧ್ಯೆ ಮನೆಗೆ ಕಳ್ಳರು ನುಗ್ಗಿ ಜಾಲಾಡುತ್ತಿರುವ ದೃಶ್ಯ ಇವರ ಮೊಬೈಲಲ್ಲಿ ಕಂಡುಬಂದಿದ್ದು, ತಕ್ಷಣ ತನ್ನ ಸಂಬಂಧಿಕರಿಗೆಮಾಹಿತಿ ನೀಡಿದ್ದರು. ಇಬ್ಬರು ಮುಸುಕುಧಾರಿ ಕಳ್ಳರು ಮನೆಯ ಕಿಟಿಕಿ ಗ್ರಿಲ್ಸ್ ತುಂಡರಿಸಿ ನುಗ್ಗಿ, ಕಪಾಟಿನಲ್ಲಿದ್ದ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಿ ಜಾಲಾಡಿದ್ದರು. ನಗದು ಅಥವಾ ಬೆಲೆಬಾಳುವ ವಸ್ತುಗಳು ಯಾವುದನ್ನೂ ಮನೆಯಲ್ಲಿ ಇರಿಸದ ಹಿನ್ನೆಲೆಯಲ್ಲಿ ಕಳವು ಯತ್ನ ವಿಫಲಗೊಂಡಿತ್ತು. ಪೊಲಿಸರು ಶ್ವಾನದಳ, ಬೆರಳಚ್ಚು ತಂಡದೊಂದಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು.

