ಕಾಸರಗೋಡು : ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅನಿವಾರ್ಐತೆಗಳಲ್ಲಿ ಒಂದಾಗಿದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸಾಹಿತ್ಯ ಮತ್ತುಸಂಶೋಧನಾ ವಿಭಾಗದ ವಿಶ್ರಾಂತ ಪ್ರಾಧಾಪಕಿ ಡಾ.ಯು.ಮಹೇಶ್ವರಿ ತಿಳಿಸಿದ್ದಾರೆ. ಅವರು ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದ 'ಚಂದ್ರಗಿರಿಯ ಮಾತು' ವಿದ್ಯಾರ್ಥಿವೇದಿಕೆ ಹಾಗೂ ಕನ್ನಡವಿಭಾಗದ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕದ ಮೇಲಿನ ಪ್ರೀತಿ, ಓದುವಿಕೆ ಕಡಿಮೆಯಾಗುತ್ತಿರುವುದು ಬೌದ್ಧಿಕ ವಿಕಾಸ ಕುಂಠಿತಗೊಳ್ಳಲು ಕಾರಣವಾಗಲಿದೆ. ಶಾಶ್ವತವಾಗಿ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮನ್ನು ವಿಸ್ತಾರವಾದ ಓದಿನ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಿದ್ಯಾರ್ಥಿ ವೇದಿಕೆ ಮತ್ತು ಗ್ರಂಥಾಲಯವನ್ನು ಉದ್ಘಾಟಿಸುತ್ತಿರುವುದು ಅರಿವಿನ ಲೋಕದ ವಿಸ್ತರಣೆಗೆ ಸಹಕಾರಿಯಾಗಲಿರುವುದಾಗಿ ತಿಳಿಸಿದರು.
ಕನ್ನಡವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ. ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಮತ್ತುಸಂಸ್ಕøತಿಯನ್ನು ದ್ವೇಷದಿಂದ ಕಟ್ಟಿಕೊಳ್ಳಲು ಸಾಧ್ಯವಿಲ್ಲ,
ಚಂದ್ರಗಿರಿ ನದಿಯು ಬಹುಭಾಷಿಕ ಮತ್ತು ಬಹುಸಂಸ್ಕøತಿಯ ಪ್ರದೇಶಗಳ ನಡುವೆ ಹರಿಯುವ ಹಾಗೆ ಕಾಸರಗೋಡಿನಬಹುಭಾಷಿಕ ಪರಿಸರ ಮತ್ತು ಬಹುಸಂಸ್ಕøತಿಯು ಇಲ್ಲಿನವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದರುಕಾರ್ಯಕ್ರಮದ ಸಂಯೋಜಕ ಡಾ. ಪ್ರವೀಣ್ ಪದ್ಯಾಣ'ಚಂದ್ರಗಿರಿಯ ಮಾತು' ವೇದಿಕೆಯ ಧ್ಯೇಯ-ಉದ್ದೇಶಗಳನ್ನುವಿವರಿಸಿದರು. . ಭಾಷೆ ಮತ್ತು ತೌಲನಿಕ ಸಾಹಿತ್ಯದ ಡೀನ್ ಡಾ. ವಿ. ರಾಜೀವ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚೇತನ್ ಮುಂಡಾಜೆ, ಡಾ. ಗೋವಿಂದರಾಜು ಕಲ್ಲೂರು ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಮತ್ತುಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಪುಷ್ಪಲತಾ ಪ್ರಾರ್ಥಿಸಿದರು. ಸ್ವಾತಿ ಸ್ವಾಗತಿಸಿದರು. ತೇಜಶ್ರೀ ನಿರೂಪಿಸಿದರು. ನವ್ಯ ವಂದಿಸಿದರು.


