ಕಾಸರಗೋಡು: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯನ್ವಯ ಕ್ಯಾಂಪೆÇ್ಕ ಕಾಸರಗೋಡು ಶಾಖೆಯ ಸಕ್ರಿಯ ಸದಸ್ಯ ಕಾಸರಗೋಡು ತಾಲೂಕು, ಚೆರ್ಕಳ ಗ್ರಾಮದ ಬೇವಿಂಜೆನಿವಾಸಿ ಕುಂಞರಾಮನ್ ಅಡ್ಕತೊಟ್ಟಿ ಅವರ ಆಂಜಿಯೋಪ್ಲಾಸ್ಟ್ ಚಿಕಿತ್ಸೆಗೆ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅವರು 50,000 ರೂ. ಸಹಾಯಧನದ ಚೆಕ್ ಕುಞÂರಾಮನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕ್ಯಾಂಪೆÇ್ಕ ಬದಿಯಡ್ಕ ಪ್ರಾದೇಶಿಕ ಹಿರಿಯ ವ್ಯವಸ್ಥಾಪಕ ಗಿರೀಶ್ ಇ, ಕಾಸರಗೋಡು ಶಾಖೆ ಪ್ರಬಂಧಕ ಜನಾರ್ದನ ನಾಯರ್ ಎ , ನಿರ್ಚಾಲ್ ಶಾಖಾ ಪ್ರಬಂಧಕ ಜಯನ್ ಇ ಮತ್ತು ಕುಂಞರಾಮನ್ ಅವರ ಪತ್ನಿ ಉಪಸ್ಥಿತರಿದ್ದರು.


