ಪೆರ್ಲ: ಎಣ್ಮಕಜೆ ಗ್ರಾ.ಪಂ.ಹಾಗೂ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸ 1ನ್ನು ಕೃಷಿ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಪಂಚಾಯತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿ ಮಾತನಾಡಿ, ಆಹಾರ, ಭಾಷೆ ಹಾಗೂ ಸಂಸ್ಕಾರ ಕೃಷಿ ಕಾಯಕದೊಂದಿಗೆ ಅಭೇದ್ಯ ನಂಟನ್ನು ಹೊಂದಿದೆ. ಆದ್ದರಿಂದ ನಮ್ಮ ಪರಂಪರಾಗತ ಕೃಷಿ ವಲಯವನ್ನು ಆಧುನಿಕ ಕೃಷಿ ಪದ್ಧತಿಯೊಂದಿಗೆ ಜೋಡಿಸಿ ಯುವಜನರನ್ನು ಹಾಗೂ ಈಗಿನ ತಲೆಮಾರನ್ನು ಕೃಷಿರಂಗದ ಕಡೆ ಆಕರ್ಷಿಸಲು ಹಾಗೂ ನಿರೋದ್ಯೋಗ ಸಮಸ್ಯೆ ಪರಿಹಾರ ಕಾಣಲು ಸರ್ಕಾರದ ಕೃಷಿ ಯೋಜನೆಗಳೊಂದಿಗೆ ಕೈಜೋಡಿಸಿದರೆ ಯಶಸ್ಸು ಸಾಧ್ಯ ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿ ಮಾತನಾಡಿ, ಹವಾಮಾನ ವೈಪರಿತ್ಯ ಹಾಗೂ ಕಾಡು ಪ್ರಾಣಿಗಳ ಉಪಟಳ ನಡುವೆ ಕೋವಿಡ್ ಮಹಾಮಾರಿಯಂತಹ ಸಂದಿಗ್ದ ಸಮಯದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಜೀವನಾಡಿಯಾಗಿ ಕೈ ಹಿಡಿದಿದೆ. ಇಂತಹ ಕೃಷಿ ಸಾಧಕರನ್ನು ಗುರುತಿಸುವುದರಲ್ಲಿ ನಾಡಿಗೆ ಅಭಿಮಾನ ಇದೆ ಎಂದರು.
ಎಣ್ಮಕಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ, ಕೆ.ಪಿ.ಅನಿಲ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಸೌದಾಭಿ ಹನೀಫ್, ಜಯಶ್ರೀ ಕುಲಾಲ್, ಹಾಗೂ ಪಂಚಾಯತಿ ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ ಎಚ್, ರಾಮಚಂದ್ರ, ನರಸಿಂಹ ಪೂಜಾರಿ, ರಮ್ಲ, ಕುಸುಮಾವತಿ, ಉಷಾ ಕುಮಾರಿ, ಝರಿನಾ ಮುಸ್ತಾಫ, ಆಶಾಲತಾ, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ಯಾಮಲ ಆರ್ ಭಟ್ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಪಿ.ಮೂಸ ಪೆರ್ಲ (ಹಿರಿಯ ಕೃಷಿಕ), ವೆಂಕಟ್ ಭಟ್ ಸರ್ಪಂಗಳ ( ಸಾವಯವ ಕೃಷಿಕ), ಅನಿತಾ ಡಿ.ಸೋಜ ಸಾಯ (ಮಹಿಳಾ ಕೃಷಿಕೆ), ಗೋಪಾಲಕೃಷ್ಣ ಶರ್ಮ ( ಆಧುನಿಕ ಕೃಷಿಕ), ವೆಂಕಟೇಶ್ ಪ್ರಸಾದ್ ಅಡ್ಯನಡ್ಕ (ಜೇನು ಕೃಷಿಕರು), ಬಾಲಕೃಷ್ಣ ವಾಣಿನಗರ (ಪರಿಶಿಷ್ಟ ಪಂಗಡದ ಕೃಷಿಕ), ಕಾರ್ತಿಕ್ ಶಂಕರ್ ಪತ್ತಡ್ಕ (ಯುವ ಕೃಷಿಕ), ಆಶೋಕ ಸೋಮಾಜೆ (ಕೃಷಿ ಕಾರ್ಮಿಕ), ನಿತೇಶ್ ಅರೆಮಂಗಿಲ (ವಿದ್ಯಾರ್ಥಿ ಕೃಷಿಕ), ವಶಿμÁ್ಠಶ್ರಮ ಎಎಲ್ ಪಿ ಶಾಲೆ ಉಕ್ಕಿನಡ್ಕ ಹಾಗೂ ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲೆಯ ಕೃಷಿ ಚಟುವಟಿಕೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಂಚಾಯತಿ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ದಿನಾಚರಣೆಯ ಅಂಗವಾಗಿ ನಡೆಸಿದ ಕೃಷಿ ರಸಪ್ರಶ್ನೆಯ ಬಹುಮಾನಗಳನ್ನು ಹಾಗೂ "ನಾವು ಕೃಷಿಯ ಕಡೆಗೆ" ಎಂಬ ವಿಷಯದಲ್ಲಿ ನಡೆಸಿದ ಪೋಟೊಗ್ರಾಫಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಿಲ್ಲೆಟ್ ಕೃಷಿ ಮತ್ತು ಮೌಲ್ಯ ವರ್ಧನೆ ಎಂಬ ವಿಷಯದ ಬಗ್ಗೆ ಡಾ.ಅಖಿಲ್ ಅಜಿತ್, ಡಾ.ಆದಿರಾ ಉಪನ್ಯಾಸ ನೀಡಿದರು. ಕೃಷಿ ಅಧಿಕಾರಿ ಅಕ್ಷತ.ವಿ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ಲ ಕುಂಞÂ್ಞ ವಂದಿಸಿದರು. ನವಾಸ್ ಮತ್ರ್ಯ ನಿರೂಪಿಸಿದರು.

.jpg)
.jpg)
.jpg)
