ಬದಿಯಡ್ಕ: ಸೇವಾಭಾರತಿ ನೀರ್ಚಾಲು ಹಾಗೂ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವಠಾರದಲ್ಲಿ ರಕ್ತದಾನ ಶಿಬಿರ ಭಾನುವಾರ ಜರಗಿತು. ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸಿ ಮಾತನಾಡಿ, ಸೇವಾಭಾರತಿಯ ಮೂಲಕ ಯುವಕರು ಸಂಘಟಿತರಾಗಿ ಜನಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯವಾಗಿದೆ. ರಕ್ತದಾನದಂತಹ ಮಹಾಕಾರ್ಯದಲ್ಲಿ ಜನರು ಪಾಲ್ಗೊಳ್ಳಬೇಕೆಂದು ಕರೆಯಿತ್ತರು.
ಸೇವಾಭಾರತಿಯ ಸದಾಶಿವ ಮಾಸ್ತರ್, ಪ್ರದೀಪ್ ಮಾಸ್ತರ್, ಬಾಲಕೃಷ್ಣ ಏಣಿಯರ್ಪು, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಸತೀಶ ಏಣಿಯರ್ಪು, ಶಶಿಧರ, ಗಂಗಾಧರ ಓಣಿಯಡ್ಕ, ಶ್ರೀಜಿತ್, ಮಹೇಶ್ ವಳಕ್ಕುಂಜ, ಅಜಿತ್ ಬೇಳ ಹಾಗೂ ಕಾರ್ಯಕರ್ತರು ನೇತೃತ್ವ ನೀಡಿದ್ದರು. ವಿವಿಧ ಸಂಘಸಂಸ್ಥೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 73 ಮಂದಿ ರಕ್ತದಾನ ಮಾಡಿ ಯಶಸ್ವಿಗೊಳಿಸಿದರು.

.jpg)
