ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ ಒಂಬತ್ತನೇ ಸರಣಿ ಕಾರ್ಯಕ್ರಮ'ವರ್ಷ ರಿಂಗಣ' ಕಾರ್ಯಕ್ರಮ ಸೆ. 30ರಂದು ಮಧ್ಯಾಹ್ನ 2.30ಕ್ಕೆ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮಾಯೋಜಿಸಲಾಗುತ್ತಿದೆ.
ಮಂಗಳೂರು ಬೆಸೆಂಟ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಸಮಾರಂಭ ಉದ್ಘಾಟಿಸುವರು. ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಕವಯಿತ್ರಿ ಲಕ್ಷ್ಮೀ ಕೆ. ಅವರ ಕವನ ಸಂಕಲನ''ನೀನಿಲ್ಲ-ಇಲ್ಲಿ ನಾನು ಮಾತ್ರ'ಕೃತಿಯ ಬಿಡುಗಡೆ ನಡೆಯುವುದು. ಕವಯಿತ್ರಿ, ಕತೆಗಾರ್ತಿ ಸ್ನೇಹಲತಾದಿವಾಕರ್ ಪುಸ್ತಕ ಪರಿಚಯ ನೀಡುವರು. ಸರೋಜಿನಿ ಕೆ. ಭಟ್, ರಂಗಚಿನ್ನಾರಿ ನಿರ್ದೇಶಕರಾದ ಚಿನ್ನ ಕಾಸರಗೋಡು, ಸತ್ಯನಾರಾಯಣ ಕೆ, ಸತೀಶ್ಚಂದ್ರ ಭಂಡಾರಿ, ಮನೋಹರ್ ಶೆಟ್ಟಿ ಉಪಸ್ಥಿತರಿರುವರು. ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಹಾಗೂ ತುಳು ಜಾನಪದ ಕಲವಿದೆ ಲಕ್ಷ್ಮೀ ಕುಂಬ್ಡಾಜೆ ಅವರನ್ನು ಗೌರವಿಸಲಾಗುವುದು. ಡಾ. ಆಶಾಲತಾ ಸನ್ಮಾನಿತರ ಪರಿಚಯ ನೀಡುವರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಭಾವಗೀತೆ, ಕೂಚುಪುಡಿ ನೃತ್ಯ, ಮಲಯಾಳ ಭಾವಗೀತೆ, ಕಥೆ, ಕಳರಿಪಯಟ್ಟ್, ಸ್ವರಚಿತ ಕವನವಾಚನ, ಶಾಸ್ತ್ರೀಯ ನೃತ್ಯ, ತುಳುಜಾನಪದ ಗೀತೆ ಗಾಯನ ನಡೆಯುವುದು.


