ತಿರುವನಂತಪುರಂ: 108ಕ್ಕೆ ಕರೆ ಮಾಡದೆಯೇ ಆಂಬ್ಯುಲೆನ್ಸ್ ಆಗಮಿಸುವ ವ್ಯವಸ್ಥೆ ಬರಲಿದೆ. ಇದಕ್ಕಾಗಿ ಮೊಬೈಲ್ ಆ್ಯಪ್ ಪರಿಚಯಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಹೊಸ ಮೊಬೈಲ್ ಆ್ಯಪ್ ಅನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಸ್ಥಾಪಿಸಲಾಗುವುದು. ಇದರೊಂದಿಗೆ 108 ಸಂಖ್ಯೆಯನ್ನು ಸಂಪರ್ಕಿಸದೆ ಮೊಬೈಲ್‍ನಲ್ಲಿ ಸ್ಥಾಪಿಸಲಾದ ಅಪ್ಲಿಕೇಶನ್ ಮೂಲಕ ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಬಹುದು.
ಆಂಬ್ಯುಲೆನ್ಸ್ ಸೇವೆ ಅಗತ್ಯವಿದ್ದರೆ ಮೊಬೈಲ್ ಪೋನ್ ನಲ್ಲಿರುವ ಜಿಪಿಎಸ್ ವ್ಯವಸ್ಥೆಯ ಸಹಾಯದಿಂದ ತುರ್ತು ಪರಿಸ್ಥಿತಿ ನಡೆದ ಸ್ಥಳದ ನಿಖರ ಮಾಹಿತಿ ಪಡೆಯಬಹುದು. ಇದು ವಿಳಂಬವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದೇ ತಿಂಗಳು ಮೊಬೈಲ್ ಆ್ಯಪ್ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕಣಿವ್ 108 ಆಂಬ್ಯುಲೆನ್ಸ್ ಯೋಜನೆ ಪ್ರಾರಂಭವಾದ ನಾಲ್ಕು ವರ್ಷಗಳಾಗಿದ್ದು, ವರದಿಯನುಸಾರ ಈವರೆಗೆ, 7,89,830 ಸಂಚಾರ ನಡೆಸಲಾಗಿದೆ. ಇದರಲ್ಲಿ 3,45,867 ಟ್ರಿಪ್‍ಗಳು ಕೋವಿಡ್‍ಗೆ ಮತ್ತು 198 ಟ್ರಿಪ್‍ಗಳು ನಿಪಾಗೆ ಸಂಬಂಧಿಸಿವೆ. ಪ್ರಸ್ತುತ ಯೋಜನೆಯ ಭಾಗವಾಗಿ ರಾಜ್ಯದಲ್ಲಿ 316 ಆಂಬ್ಯುಲೆನ್ಸ್‍ಗಳು ಮತ್ತು 1300 ನೌಕರರು ಸೇವೆ ಸಲ್ಲಿಸುತ್ತಿದ್ದಾರೆ.


