ಕಾಸರಗೋಡು: ಶಸ್ತ್ರಚಿಕಿತ್ಸೆಗೆ ರೋಗಿಯೊಬ್ಬರಿಂದ 2ಸಾವಿರ ರೂ. ಲಂಚ ಸ್ವೀಕರಿಸಿದ ಕಾಸರಗೋಡು ಜನರಲ್ ಆಸ್ಪತ್ರೆ ಅನಾಸ್ತೇಶಿಯಾ ತಜ್ಞ ಕೆ.ಎಂ ವೆಂಕಟಗಿರಿ ಅವರನ್ನು ವಿಜಿಲೆನ್ಸ್ ಪೊಲೀಸರು ಬಂಧಿಸಿದ್ದಾರೆ. ವೈದ್ಯರನ್ನು ಕೋಯಿಕ್ಕೋಡಿನವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಸತಿಯಲ್ಲಿ ಹಾಜರುಪಡಿಸಲಾಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನುಳ್ಳಿಪ್ಪಾಡಿಯ ತಮ್ಮ ವಸತಿಯಲ್ಲಿ ರೋಗಿಯಿಂದ 2ಸಾವಿರ ರೂ. ಲಂಚ ಸ್ವೀಕರಿಸುವ ಮಧ್ಯೆ ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ ವಿಶ್ವಂಭರನ್ ನಾಯರ್ ನೇತೃತ್ವದ ತಂಡ ಇವರ ಮನೆಗೆ ದಾಳಿ ನಡೆಸಿ ಬಂಧಿಸಿದ್ದರು. ಮಧೂರು ಪಟ್ಲ ನಿವಾಸಿಯೊಬ್ಬರು ಸೆ. 21ರಂದು ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಲುಪಿದ್ದು, ತಪಾಸಣೆ ನಡೆಸಿದ ಸರ್ಜನ್, ಶಸ್ತ್ರಚಿಕಿತ್ಸೆ ಶಿಫಾರಸು ಮಾಡಿದ್ದರು. ಇದಕ್ಕಾಗಿ ಅನಾಸ್ತೇಶಿಯ ತಜ್ಞ ಡಾ. ವೆಂಕಟಗಿರಿ ಅವರನ್ನು ಭೇಟಿಮಾಡಿದಾಗ ಡಿಸೆಂಬರ್ ತಿಂಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವುದಾಘಿ ತಿಳಿಸಿದ್ದರು. ಇದಕ್ಕೂ ಮೊದಲು ಶಸ್ತ್ರಚಿಕಿತ್ಸೆ ನಡೆಸುವಂತೆ ರೋಗಿ ಕಡೆಯವರು ಕೇಳಿಕೊಮಡಾಗ 2ಸಾವಿರ ರಊ. ಲಂಚದ ಬೇಡಿಕೆಯಿರಿಸಿದ್ದರು. ಈ ಬಗ್ಗೆ ವಿಜಿಲೆನ್ಸ್ ಎಸ್.ಪಿಗೆ ದೂರು ನೀಡಿದ್ದು, ವಿಜಿಲೆನ್ಸ್ ನೀಡಿದ್ದ ರಾಸಾಯನಿಕ ಲೇಪಿಸಿದ್ದ2ಸಾವಿರ ರೂ. ಮೊತ್ತವನ್ನು ಮಂಗಳವಾರ ಸಂಜೆ ವೈದ್ಯರ ಮನೆಗೆ ಕೊಂಡೊಯ್ದು ನೀಡುತ್ತಿದ್ದಂತೆ ದಾಳಿ ನಡೆಸಲಾಗಿದೆ.
2019ರಲ್ಲೂ ಇವರ ವಿರುದ್ಧ ಲಂಚದ ಆರೋಪ ಕೇಳಿಬಂದಿದ್ದು, ಇಲಾಖಾ ಮಟ್ಟದ ತನಿಖೆ ನಡೆಸಲಾಗಿತ್ತು.

.jpeg)
