ಮುಳ್ಳೇರಿಯ: ದೇಲಂಪಾಡಿ ಶ್ರೀಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ವವ ಸಮಾರಂಭದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಮಂದಿರದಲ್ಲಿ ಜರುಗಿತು.
ದಾರ್ಮಿಕ ಮುಖಂಡ, ಹಿರಿಯ ಉದ್ಯಮಿ ವಸಂತ ಪೈ ಬದಿಯಡ್ಕ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ದೀಪೋತ್ಸವ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ಬ್ಲಾಕ್ ಪಂಚಾಯಿತಿ ಸಸ್ಯೆ ಯಶೋಧಾ, ಕಾರಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜನನಿ ಎಂ, ಸದಸ್ಯ ಸಂತೋಷ್ ಸಿ.ಎಂ, ಗುರುಸ್ವಾಮಿ ವಿಠಲ ಶೆಟ್ಟಿ, ಕೆ.ಇ ಪಾಣೂರು, ಪುರುಷೋತ್ತಮನ್ ಎಂ.ಎಸ್, ಚಂದು ಮಾಸ್ಟರ್, ರಾಘವನ್ ಕರಿಂಬುವಳಪ್ಪು, ಮೊದಲಾದವರು ಉಪಸ್ಥಿತರಿದ್ದರು. ಪ್ರದೀಪ್ ಕೆ.ವಿ ಸವಾಗತಿಸಿದರು. ಸುರೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಯತೀಶ್ ಕುಮಾರ್ ರೈ ವಂದಿಸಿದರು.


