ಕಾಸರಗೋಡು: ಯುವ ಕ್ಷಾತ್ರ ಅಬ್ಬಕ್ಕ ನಾಡು ಮತ್ತು ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಉಳ್ಳಾಲ ತಾಲೂಕು ಆಯೋಜಿಸಿದ 'ಶ್ರಾವೊಣ್ದ್ ಬೈಸಾರೆಲಿ ಕೋಟೆಕನ್ನಡದ್ ಹಬ್ಬ' ಎನ್ನುವ ವಿನೂತನ ಕಾರ್ಯಕ್ರಮ ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬಾಲಂಭಟ್ ಮನೆತನದ ಡಾ. ಸತ್ಯಕೃಷ್ಣಭಟ್ ಉದ್ಘಾಟನೆ ಮಾಡಿ ಮಾತನಾಡಿದರು. ಆಚರಣೆಗಳಿಗೆ ಅದರದೆ ಮಹತ್ವವಿದೆ. ಕೋಟೆಯವರ ಸಂಸ್ಕøತಿಯನ್ನು ಆ ಸಮುದಾಯದವರೆ ಉಳಿಸಿಕೊಳ್ಳಬೇಕು, ಅವರು ಉತ್ತಮ ಪರಂಪರೆಯನ್ನು ಇಂದಿಗೂ ಇಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದರು.
ಪತ್ರಕರ್ತ ಪ್ರದೀಪ್ ಬೇಕಲ್ ಕೋಟೆ ಕನ್ನಡದ ಕುರಿತು ಉಪನ್ಯಾಸ ನೀಡಿದರು. ಭಾಷೆ ಆಯಾ ಪ್ರದೇಶದ ಭಾಷೆಯಿಂದ ಪ್ರಭಾವಿತವಾಗುತ್ತದೆ. ಕೋಟೆ ಕನ್ನಡವು ಹೀಗೆ ಕೊಡುಕೊಳ್ಳುವ ನೆಲೆಯಲ್ಲಿ ಶ್ರೀಮಂತವಾಗಿದೆ ಎಂದು ತಿಳಿಸಿದರು. ಕೋಟೆಯವರ ಆಚರಣೆಯ ರೂಪಕವನ್ನು ಪ್ರಸ್ತುತಪಡಿಸಲಾಯಿತು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು ಸಮಿತಿ ಗೌರವಾಧ್ಯಕ್ಷ ಸೀತಾರಾಮ ಕೊಪ್ಪಲು, ಅಧ್ಯಕ್ಷ ಮಾಧವ ರಾವ್ ಕಿನ್ಯ, ಯುವ ಕ್ಷಾತ್ರ ಗೌರವಾಧ್ಯಕ್ಷ ಅಮಿತ್ ರಾಜ್ ಬೇಕಲ್ ಉಪಸ್ಥಿತರಿದ್ದರು. ಸಹನಾ ಮತ್ತು ಅಪರ್ಣಾ ಪ್ರಾರ್ಥನೆ ಹಾಡಿದರು. ಅಂಕುಶ್ ಕುಮಾರ್ ಹೂಡೆ ಸ್ವಾಗತಿಸಿದರು. ವಿನ್ಯಾಸ್ ಚಂದ್ರಗಿರಿ ನಿರೂಪಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ಪ್ರಭಾಕರ್ ವಂದಿಸಿದರು.


