ಪತ್ತನಂತಿಟ್ಟ: ವಿಶ್ವಕಪ್ ಕ್ರಿಕೆಟ್ ಸಂಭ್ರಮದ ಮಧ್ಯೆ ಭಾರತಕ್ಕೆ ಜಯವಾಗಲಿ ಎಂದು ತಮಿಳುನಾಡಿನ ಅಯ್ಯಪ್ಪ ಭಕ್ತರ ಗುಂಪೆÇಂದು ವ್ರತಧಾರಿಗಳಾಗಿ ಶಬರಿಮಲೆ ಯಾತ್ರೆ ನಡೆಸಿರುವರು.
ಭಾರತದ ವಿಜಯಕ್ಕಾಗಿ ಅಯ್ಯಪ್ಪನನ್ನು ಪ್ರಾರ್ಥಿಸಲು ತಮಿಳುನಾಡಿನ ಸ್ವಾಮಿಗಳು ಶಬರಿಮಲೆಗೆ ಆಗಮಿಸಿದರು. ಇದೇ ವೇಳೆ 18ನೇ ಮೆಟ್ಟಿಲಲ್ಲಿ ತೆಂಗಿನಕಾಯಿ ಕೀಳುವ ಕಾರ್ಮಿಕರ ತಂಡವೊಂದು ಹೆಲ್ಮೆಟ್ ಧರಿಸಿ ವಿಶ್ವಕಪ್ ಕ್ರಿಕೆಟ್ ಸಂಭ್ರಮದಲ್ಲಿ ಭಾರತದ ಜಯಕ್ಕೆ ಸಂಪ್ರಾರ್ಥಿಸಿದರು. . ಇಂದು ವಿಶ್ವಕಪ್ ಫೈನಲ್ ನಡೆದಿದೆ. ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್‍ನಲ್ಲಿ ಪಿಚ್‍ನಲ್ಲಿ ಯಾರಿಗೆ ಅದೃಷ್ಟ ಒದಗುತ್ತದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಟೂರ್ನಿಯಲ್ಲಿ ಭಾರತ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‍ಗೆ ಅರ್ಹತೆ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿ ಫೈನಲ್‍ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡಿದೆ. ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯವನ್ನು ವೀಕ್ಷಿಸಲು ಹಲವು ರಾಷ್ಟ್ರೀಯ ಮತ್ತು ಚಲನಚಿತ್ರ ತಾರೆಯರು ಈಗಾಗಲೇ ಅಹಮದಾಬಾದ್ ತಲುಪಿದ್ದಾರೆ.


