ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನಕ್ಕೆ (ನ.19) ಇಂದು ಸಂಜೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಃಂರತೀ ಶ್ರೀ ಚಿತ್ತೈಸಲಿದ್ದು, ಸೋಮವಾರ ಭಿಕ್ಷಾಸೇವೆ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಊರಪರವೂರ ಅನೇಕ ಭಕ್ತ ಜನರು, ಶಿಷ್ಯವೃಂದದವರು ಪಾಲ್ಗೊಳ್ಳಲ್ಲಿದ್ದಾರೆ.
ಕಾರ್ಯಕ್ರಮದ ಸಿದ್ಧತೆಗಾಗಿ ಕಾರ್ಯಕರ್ತರು ಹಗಲಿರುಳು ಶ್ರಮದಾನದಲ್ಲಿ ತೊಡಗಿದ್ದು, ಶನಿವಾರ ಬೆಳಗ್ಗೆ ಹಸಿರುವಾಣಿಯೊಂದಿಗೆ ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಶ್ರೀ ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಬಾಲಾಲಯದಲ್ಲಿರುವ ಶ್ರೀ ದೇವರ ಸನ್ನಿಧಿಯನ್ನು ಪ್ರಾರ್ಥನೆ ನಡೆಸಿ ಉಗ್ರಾಣಮುಹೂರ್ತ ನೆರವೇರಿಸಿದರು. ಶ್ರೀ ಶಂಕರನಾರಾಯಣ ಸ್ವಾಮಿದೇವಸ್ಥಾನ ಅಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ವಿ.ಬಿ.ಕುಳಮರ್ವ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ಯಾಂಭಟ್ ಕುಂಟಿಕಾನ ಮಠ, ಶಂಕರನಾರಾಯಣ ಶರ್ಮ ಕುಂಟಿಕಾನ, ಊರಪರವೂರ ಭಗವದ್ಭಕ್ತರು ಪಾಲ್ಗೊಂಡಿದ್ದರು.


