ಮಂಜೇಶ್ವರ: ಕುಟುಂಬಶ್ರೀ ಸದಸ್ಯೆಯರಿಗೆ ಕೇರಳ ರಾಜ್ಯ ಕುಟುಂಬಶ್ರೀ ಮಿಶನ್‍ನ ಆದೇಶದಂತೆ ಎಸ್.ವಿ.ವಿ.ಎಚ್.ಎಸ್ ಶಾಲೆ ಮೀಯಪದವಿವನಲ್ಲಿ ಮರಳಿ ಶಾಲೆಗೆ ಎಂಬ ತರಗತಿಯನ್ನು ನಡೆಸಲಾಯಿತು. ಸಿ.ಡಿ.ಎಸ್ ಅಧ್ಯಕ್ಷೆ ಶಾಲಿನಿ.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಕುಟುಂಬಶ್ರೀಯ ಸಂಘಟನಾ ಶಾಕ್ತೀಕರಣ ಬಗ್ಗೆ 5 ತರಗತಿಯನ್ನು 15 ಸಂಪನ್ಮೂಲ ವ್ಯಕ್ತಿಗಳು ಸೇರಿ ನಡೆಸಿಕೊಟ್ಟರು. ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಪಂಚಾಯತಿ ಕಾರ್ಯದರ್ಶಿ ಸುರೇಶ್.ಎಸ್.ಪಿ, ಸಹ ಕಾರ್ಯದರ್ಶಿ ನಾರಾಯಣ ಎಮ್, ಸಿ.ಡಿ.ಎಸ್ ಅಕೌಂಟೆಂಟ್ ಉದಯಕುಮಾರ್ ಸಿ., ಮೆಂಟರ್ ಪದ್ಮಜ ಶ್ರೀದೇವಿ, ಶಮೀನ ಸಿ.ಸಿ, ಪ್ರಸೀದ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
