ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾಸರಗೋಡು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ವಿವಿಧ ಪ್ರಕರಣಗಳಿಗೆ ತೀರ್ಪು ಕಲ್ಪಿಸಲಾಯಿತು.
110 ರಸ್ತೆ ಅಪಘಾತ ಪ್ರಕರಣಗಳಿಗೆ ಪರಿಹಾರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿಯ 2008 ಸಣ್ಣಪುಟ್ಟ ಪ್ರಕರಣ ಮತ್ತು ವಿವಿಧ ರೀತಿಯ 200 ಕ್ಕೂ ಹೆಚ್ಚು ಪ್ರಕರಣಗಳಿಗೆ ತೀರ್ಪು ನೀಡಲಾಯಿತು.
ಒಟ್ಟು ಐದೂವರೆ ಕೋಟಿ ರೂ. ಮೊತ್ತದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಕಾಸರಗೋಡು ಜಿಲ್ಲಾ ನ್ಯಾಯಾಧೀಶ ಕೆ.ಕೆ.ಬಾಲಕೃಷ್ಣನ್, ಉಪ ನ್ಯಾಯಾಧೀಶೆ ಆರ್.ವಂದನಾ, ಹೊಸದುರ್ಗ ವಿಶೇಷ ನ್ಯಾಯಾಧೀಶ ಸುರೇಶ್ ಕುಮಾರ್ ನೇತ್ರತ್ವದಲ್ಲಿ ಅದಾಲತ್ ನಡೆಸಲಾಯಿತು.

