ಕಾಸರಗೋಡು: ಉತ್ತರವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ 'ಪಿಲಿಕೋಡ್ ಫಾರ್ಮ್ ಕಾರ್ನಿವಲ್-2024'ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಬಿಆರ್ಸಿ ಚೆರುವತ್ತೂರಿನ ವಿಕಲಚೇತನ ಮಕ್ಕಳೊಂದಿಗೆ ಗಾಳಿಪಟ ಹಾರಿಸುವ ಮೂಲಕ ಕಾರ್ನೀವಲ್ ಉದ್ಘಾಟಿಸಿದರು.
ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಂಶೋಧನಾ ಮಂಜೇಶ್ವರ ವಿಸ್ತರಣಾ ತರಬೇತಿ ಕೇಂದ್ರದ ಮುಖ್ಯಸ್ಥಡಾ.ಬಿ.ರಮೇಶ, ಗ್ರಾಪಂ ಸದಸ್ಯೆ ಪಿ.ಅಜಿತಾ, ಪನಿಯೂರು ಕಾಳುಮೆಣಸು ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ರಶ್ಮಿ ಪೌಲ್, ವಿದ್ಯಾಕಿರಣ ಮಿಷನ್ ಕಾಸರಗೋಡು ಜಿಲ್ಲಾ ಸಂಯೋಜಕ ಎಂ.ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ನಿವಲ್ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಕೇಂದ್ರವು ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಡನ್ನಕ್ಕಾಡ್ ಕೃಷಿ ಕಾಲೇಜಿನ ಡೀನ್ ಡಾ.ಸಜಿತಾರಾಣಿ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ಖ್ಯಾತ ಮೌತ್ ಪೇಂಟಿಂಗ್ ಕಲಾವಿದೆ ಸುನೀತಾ ತ್ರಿಪ್ಪಾಣಿಕರ ವಿಶೇಷ ಅತಿಥಿಯಾಗಿದ್ದರು. ಉತ್ತರ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ಟಿ.ಟಿ.ವನಜ ಸ್ವಾಗತಿಸಿದರು. ಕೇಂದ್ರದ ಸಹ ಪ್ರಾಧ್ಯಾಪಕ ಪಿ.ಕೆ.ರತೀಶ್ ವಂದಿಸಿದರು.


