ತಿರುವನಂತಪುರಂ: ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಆಂಬ್ಯುಲೆನ್ಸ್ ಸೌಲಭ್ಯವಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕರ ವರದಿ ಹೊರಬಿದ್ದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತೊಡಗಿ ಜಿಲ್ಲಾ, ಸಾಮಾನ್ಯ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅಗತ್ಯವಿದ್ದರೂ ಆಂಬ್ಯುಲೆನ್ಸ್ ಇಲ್ಲ. ರಾಜ್ಯದಲ್ಲಿ 615 ಸರ್ಕಾರಿ ಆರೋಗ್ಯ ಸಂಸ್ಥೆಗಳು ಆಂಬ್ಯುಲೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎರ್ನಾಕುಳಂ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಇಲ್ಲದ ಅತಿ ಹೆಚ್ಚು ಆಸ್ಪತ್ರೆಗಳಿವೆ. ಜಿಲ್ಲೆಯ 79 ಸಂಸ್ಥೆಗಳಿಗೆ ಆಂಬ್ಯುಲೆನ್ಸ್ ಇಲ್ಲ. ದುರಸ್ಥಿಗಾಗಿ ಹೋಗಿರುವ ಹಲವು ಆಂಬ್ಯುಲೆನ್ಸ್ ಗಳನ್ನು ವಾಪಸ್ ತರುವಷ್ಟು ಹಣವಿಲ್ಲ. ಆಂಬ್ಯುಲೆನ್ಸ್ ಇಲ್ಲದ ಆಸ್ಪತ್ರೆಗಳು ಕೂಡಲೇ ಆಂಬ್ಯುಲೆನ್ಸ್ ಪಡೆಯುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಸಿದ್ಧಪಡಿಸಿರುವ ವರದಿಯಲ್ಲಿ ಸೂಚಿಸಲಾಗಿದೆ. ಆದಾಗ್ಯೂ, ಪ್ರತ್ಯೇಕ ಸ್ಥಳಗಳಲ್ಲಿ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಡ್ಡಾಯವಾಗಿ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಆಂಬ್ಯುಲೆನ್ಸ್ ಇಲ್ಲದ ಆರೋಗ್ಯ ಸೌಲಭ್ಯಗಳ ಜಿಲ್ಲಾವಾರು ಎಣಿಕೆ;
ತಿರುವನಂತಪುರಂ 21, ಕೊಲ್ಲಂ 31, ಪತ್ತನಂತಿಟ್ಟ 20, ಆಲಪ್ಪುಳ 70, ಕೊಟ್ಟಾಯಂ 27, ಇಡುಕ್ಕಿ 21, ಎರ್ನಾಕುಲಂ 79, ತ್ರಿಶೂರ್ 78, ಪಾಲಕ್ಕಾಡ್ 78, ಮಲಪ್ಪುರಂ 40, ಕೋಝಿಕ್ಕೋಡ್ 42, ವಯನಾಡ್ 23, ಕಣ್ಣೂರು 42, ಕಾಸರಗೋಡು 43.


