ಕೊಚ್ಚಿ: ವೈಪಿನ್ ನ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂಬ ದೂರು ಬಂದಿದೆ. ಎಂಟನೇ ತರಗತಿ ವಿದ್ಯಾರ್ಥಿಗಳಾದ ಅಚ್ಚು, ಆದೀಶ್ ಮತ್ತು ಅಶ್ಮಿನ್ ನಾಪತ್ತೆಯಾಗಿದ್ದಾರೆ.
ಪತ್ರ ಬರೆದು ಮಕ್ಕಳು ನಿನ್ನೆ ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ತೆರಳಿದ್ದರು. ಆದರೆ ಪಾಲಕರಿಗೆ 11 ಗಂಟೆಯ ಹೊತ್ತಿಗೆ ಪತ್ರ ಲಭಿಸಿದೆ.
ಇವರಲ್ಲಿ ಅಚ್ಚು ಮತ್ತು ಆದಿಶ್ ಒಂದೇ ಕುಟುಂಬದ ಮಕ್ಕಳು. ಇಬ್ಬರೂ ಅಣ್ಣ ತಮ್ಮಂದಿರ ಮಕ್ಕಳು.ಅಶ್ಮಿನ್ ಅವರ ನೆರೆಮನೆಯವರು. ಅವರಿಗೆ ಮನೆಯಲ್ಲಿ ಸ್ವಾತಂತ್ರ್ಯವಿಲ್ಲ, ಓದಲು ಬಿಡುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಞರಕಲ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಮಕ್ಕಳ ಬಳಿ ಪೋನ್ ಇಲ್ಲದ ಕಾರಣ ಪತ್ತೆ ಹಚ್ಚುವುದು ಕಷ್ಟವಾಗಿದೆ ಎನ್ನುತ್ತಾರೆ ಪೋಲೀಸರು.


