ಬದಿಯಡ್ಕ,: ಸಮಗ್ರ ಶಿಕ್ಷಾ ಅಭಿಯಾನ ಕೇರಳ ಮತ್ತು ಬಿಆರ್‍ಸಿ ಕುಂಬಳೆ ಇದರ ಆಶ್ರಯದಲ್ಲಿ ಅಂಗವಿಕಲ ದಿನ ಮಾಸಾಚರಣೆಯ ಇನ್‍ಕ್ಲೂಸಿವ್ ಸ್ಪೋಟ್ರ್ಸ್ ಮತ್ತು ಗೇಮ್ಸ್ ಸಮಾಪನ ಸಮಾರಂಭ ಬದಿಯಡ್ಕದಲ್ಲಿ ನಡೆಯಿತು.
ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿದ್ಯಾಭ್ಯಾಸ ಉಪ ನಿರ್ದೇಶಕ ನಂದಿಕೇಶ್ ಎನ್. ಉದ್ಘಾಟಿಸಿದರು. ಜಿಲ್ಲಾ ಕೋರ್ಡಿನೇಟರ್ ನಾರಾಯಣನ್ ಡಿ, ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಮುಖ್ಯ ಅತಿಥಿಯಾಗಿದ್ದರು. ಅಂಗವಿಕಲ ಮಾಸಾಚರಣೆ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳು, ಕಲಾ ಸ್ಪರ್ಧೆಗಳು, ನಾಟಕ, ಕಳರಿ, ಇನ್ನಿತರ ಜನಪದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಬಿಪಿಸಿ ಜಯರಾಮ್ ಸ್ವಾಗತಿಸಿದರು. ಸಿಆರ್‍ಸಿ ಸಂಯೋಜಕರಾದ ಸುಶೀಲ ವಂದಿಸಿದರು.

.jpg)
