ನವದೆಹಲಿ: ವಿಮಾನದ ಕರ್ತವ್ಯದ ಸಮಯ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಕ್ಕೆ ಇಂದು (ಶುಕ್ರವಾರ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ₹80 ಲಕ್ಷ ದಂಡ ವಿಧಿಸಿದೆ.
0
samarasasudhi
ಮಾರ್ಚ್ 23, 2024
ನವದೆಹಲಿ: ವಿಮಾನದ ಕರ್ತವ್ಯದ ಸಮಯ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಏರ್ ಇಂಡಿಯಾಕ್ಕೆ ಇಂದು (ಶುಕ್ರವಾರ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ₹80 ಲಕ್ಷ ದಂಡ ವಿಧಿಸಿದೆ.
ಡಿಜಿಸಿಎಯು ಜನವರಿಯಲ್ಲಿ ಏರ್ ಇಂಡಿಯಾದ ಸ್ಪಾಟ್ ಆಡಿಟ್ ಅನ್ನು ನಡೆಸಿತ್ತು. ಆಗ ಸಂಗ್ರಹಿಸಲಾಗಿದ್ದ ಸಾಕ್ಷಾಧಾರಗಳು ಆಧಾರದ ಮೇಲೆ ಡಿಜಿಸಿಎ ಇದೀಗ ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ (ಎಫ್‌ಡಿಟಿಎಲ್) ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ಹೇಳಿದೆ.
ಈ ಕಾರಣಗಳಿಂದಾಗಿ ಮಾರ್ಚ್ 1ರಂದು ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು.
2022ರ ನವೆಂಬರ್ 22ರಂದು ಪ್ರಯಾಣಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕುರಿತಾದ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ಡಿಜಿಸಿಎ ಏರ್ ಇಂಡಿಯಾಕ್ಕೆ ಎರಡನೇ ಬಾರಿಗೆ ₹10 ಲಕ್ಷ ದಂಡ ವಿಧಿಸಿತ್ತು.