ಲಖನೌ: ಸಂಪತ್ತು, ಜ್ಞಾನ, ವಿಜ್ಞಾನ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇಡೀ ಜಗತ್ತನ್ನು ಮುನ್ನಡೆಸಬಲ್ಲ ಭಾರತವನ್ನು ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
0
samarasasudhi
ಮೇ 10, 2024
ಲಖನೌ: ಸಂಪತ್ತು, ಜ್ಞಾನ, ವಿಜ್ಞಾನ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇಡೀ ಜಗತ್ತನ್ನು ಮುನ್ನಡೆಸಬಲ್ಲ ಭಾರತವನ್ನು ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗೋಮತಿ ನಗರದ ಖಾಸಗಿ ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಾಜಕೀಯ ನಾಯಕರ ನಡೆ ಮತ್ತು ಮಾತಿನ ನಡುವಿನ ವ್ಯತ್ಯಾಸದಿಂದಾಗಿ ದೇಶದಲ್ಲಿ ವಿಶ್ವಾಸದ ಬಿಕ್ಕಟ್ಟು ಉದ್ಭವಿಸಿದೆ.
ಜನರಲ್ಲಿ ಜವಾಬ್ದಾರಿಯ ಪ್ರಜ್ಞೆ ಮೂಡಿದಾಗ ಮಾತ್ರ ದೇಶದಲ್ಲಿ ರಾಮರಾಜ್ಯ ಸ್ಥಾಪನೆಗೊಳ್ಳುತ್ತದೆ. ಜವಾಬ್ದಾರಿ ಇಲ್ಲದೆ ಬರೀ ಅಧಿಕಾರವನ್ನು ಹೊಂದಿದ್ದರೆ ರಾಮರಾಜ್ಯ ಸ್ಥಾಪನೆ ಎಂದಿಗೂ ಸಾಧ್ಯವಾಗುವುದಿಲ್ಲ. ಹಿಂದಿನ ಕಾಲಕ್ಕೆ ಹೋಲಿಸಿದರೆ, ಇಂದು ಜನರಲ್ಲಿ ದೇಶದ ಬಗ್ಗೆ ಸ್ವಾಭಿಮಾನದ ಭಾವನೆ ಬೆಳೆದಿದೆ ಎಂದು ಹೇಳಿದರು.
ಮೇ 20ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಲಖನೌ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.