ಕಾಸರಗೋಡು: ಸಂಚರಿಸುತ್ತಿದ್ದ ಖಾಸಗಿ ಬಸ್ಸಲ್ಲಿ ಏಕಾಏಖಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ದುರಂತ ತಪ್ಪಿದೆ. ಕಾಞಂಗಾಡಿನಲ್ಲಿ ಶುಕ್ರವಾರ ಘಟನೆ ನಡೆದಿದೆ. ಕಾಸರಗೋಡಿನಿಂದ ಪಯ್ಯನ್ನೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾಞಂಗಾಡು ಕೋಟಚ್ಚೇರಿಯ ಟ್ರಾಫಿಕ್ ಸರ್ಕಲ್ ಬಳಿ ತಲುಪುತ್ತಿದ್ದಂತೆ ಬಸ್ಸಿನ ಎದುರುಭಾಗದಿಂದ ಹೊಗೆಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ರಸ್ತೆಅಂಚಿಗೆ ಬಸ್ಸನ್ನು ನಿಲುಗಡೆಗೊಳಿಸಿದ್ದಾರೆ. ತಕ್ಷಣ ಪ್ರಯಾಣಿಕರು ಬಸ್ಸಿಂದ ಇಳಿದಿದ್ದು, ಸ್ಥಳದಲ್ಲಿದ್ದ ತಲೆಹೊರೆಕಾರ್ಮಿಕರು, ಹೋಮ್‍ಗಾರ್ಡ್‍ಗಳು ಸನಿಹದಿಂದ ನೀರು ತಂದು ಬಸ್ಸಿಗೆ ಹಾಯಿಸಿ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಯಂತ್ರದೊಳಗೆ ಉಂಟಾಗಿರುವ ಶಾರ್ಟ್ ಸಕ್ರ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆನ್ನಲಾಗಿದೆ.

