ಮಂಜೇಶ್ವರ: ಮುಡಿಮಾರು ಶ್ರೀ ಮಲರಾಯ ಗುಳಿಗ ದೈವಸ್ಥಾನದ 12ನೇ ಪ್ರತಿಷ್ಠಾ ವಾರ್ಷಿಕೋತ್ಸವ ಜರುಗಿತು. ಶ್ರೀ ದೈವಗಳ ನೇಮೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತ. ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಶ್ರೀಮಲರಾಯ, ಗುಳಿಗ ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ವಿವಿಧ ನೃತ್ಯಾವಳಿ, ಶಾರದ ಕಲಾ ಆಟ್ರ್ಸ್ ಮಂಜೇಶ್ವರ ಇವರಿಂದ "ಕಥೆ ಎಡ್ಡೆಂಡು "ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಈ ಸಂದರ್ಭ ಚಿತ್ರರಂಗ ಹಾಗೂ ನಾಟಕ ರಂಗದ ಹೆಸರಾಂತ ಕಲಾವಿದರಾದ ಪ್ರಕಾಶ್ ತೂಮಿನಾಡು ,ರಾಜೇಶ್ ಮುಗುಳಿ, ಪ್ರಭಾಕರ್ ಕೊಲ್ಯ ಹಾಗೂ ಸುರೇಶ್ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷ ಕೃಷ್ಣ ಶಿವ ಕೃಪ, ಮುಡಿಮಾರು ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ರವಿಮುಡಿಮಾರು, ಕಾರ್ಯದರ್ಶಿಗಳಾದ ನವೀನ್ ಮುಡಿಮಾರು ಹಾಗೂ ನವಿರಾಜ್ ಮಡಿಮಾರು ಗೌರವಾರ್ಪಣೆ ಸಲ್ಲಿಸಿದರು.


