ಕಾಸರಗೋಡು: ರಾಜಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಬಳಾಂತೋಡು ಸನಿಹ ಹೊಳೆಯಲ್ಲಿ ಸ್ನಾನ ಮಾಡುವ ಮಧ್ಯೆ ನೀರಿನ ಸೆಲೆತಕ್ಕೆ ಸಿಲುಕಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬಳಾಂತೋಡು ಕೊಯತ್ತಡ್ಕ ನಿವಾಸಿ ರಾಜನ್ ಎಂಬವರ ಪುತ್ರ, ರಾಜಾಪುರಂನ ಖಾಸಗಿ ಕಾಲೇಜೊಂದರ ಬಿಬಿಎ ವಿದ್ಯಾರ್ಥಿ ಎ.ಆರ್ ರಾಹುಲ್(10)ಮೃತಪಟ್ಟ ವಿದ್ಯಾರ್ಥಿ. ಬಳಾಂತೋಡು ಮಾಯತ್ತಿ ಶ್ರೀ ಭಗವತೀ ಕ್ಷೇತ್ರ ಸನಿಹದ ಹೊಳೆಗೆ ಸ್ನೇಹಿತರ ಜತೆ ಮೀನು ಹಿಡಿಯಲು ತೆರಳಿದ್ದು, ನಂತರ ಸ್ನಾನಕ್ಕಾಗಿ ಹೊಳೆಗಿಳಿದಾಗ ಆಯತಪ್ಪಿ ನೀರುಪಾಲಾಗಿದ್ದರು. ಜತೆಗಿದ್ದ ಸ್ನೇಹಿತರು ಬೊಬ್ಬಿಡುತ್ತಿದ್ದಂತೆ ಆಸುಪಸಿನವರು ಆಗಮಿಸಿ ರಾಹುಲ್‍ನನ್ನು ನೀರಿಮದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ರಾಜಾಪುರಂ ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.

