ಕಾಸರಗೋಡು: ಜಲಶಕ್ತಿ ಅಭಿಯಾನ ಯೋಜನೆ ಅಂಗವಾಗಿ, ಖಾಸಗಿ ವ್ಯಕ್ತಿಗಳದ್ದೂ ಒಳಗೊಂಡಂತೆ 1,828 ಕೊಳವೆಬಾವಿಗಳ ಕುರಿತಾದ ಮಾಹಿತಿ ಸಂಗ್ರಹ ಪೂರ್ಣಗೊಂಡಿದೆ. ಇವುಗಳಲ್ಲಿ ಆಯ್ಕೆಮಾಡಲಾದ ಕೆಲವು ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಲಾಗುವುದು. ಕುಟುಂಬಶ್ರೀ ಸದಸ್ಯರು ನಡೆಸಿದ ಸಮೀಕ್ಷೆಯಲ್ಲಿ ಕಾಸರಗೋಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ 1,828 ಕೊಳವೆಬಾವಿಗಳನ್ನು ಪತ್ತಹಚ್ಚಲಾಗಿದ್ದು, ಈ ಎಲ್ಲಾ ಕೊಳವೆಬಾವಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಸಿಆರ್ಡಿ ಸಂಯುಕ್ತವಾಗಿ ಮರುಪೂರಣಗೊಳಿಸಲಿವೆ. ಕಾಸರಗೋಡು ಬ್ಲಾಕ್ ಪಂಚಾಯಿತಿಯಲ್ಲಿ ಸಿಆರ್ಡಿ ಇಲ್ಲಿಯ ತನಕ 162 ಬೋರ್ವೆಲ್ಗಳನ್ನು ಮರುಪೂರಣಗೊಳಿಸಿದೆ.
ಅರಣ್ಯ ಪ್ರದೇಶದಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರತ್ಯೇಕ ರೀತಿಯ ನೀರಿನ ಮೂಲಗಳಾಗಿರುವ ಸುರಂಗಗಳ ಕುರಿತಾದ ಮಾಹಿತಿಗಳನ್ನು ಸ್ಥಳೀಯಾಡಳಿತ ಇಲಾಖೆ ಸಂಗ್ರಹಿಸುತ್ತಿದೆ. ಇದು ವರೆಗೆ 271 ಸುರಂಗಗಳನ್ನು ಪತ್ತೆಹಚ್ಚಲಾಗಿದೆ. ಇವುಗಳ ಮಾಹಿತಿ ಸಂಗ್ರಹ ಪೂರ್ಣಗೊಂಡ ನಂತರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಇವುಗಳನ್ನು ನವೀಕರಿಸಲಾಗುತ್ತದೆ.
ಶಾಲೆಗಳಲ್ಲಿ ನಿರುಪಯುಕ್ತವಾಗಿರುವ ನೀರಿನ ಟ್ಯಾಂಕ್ಗಳನ್ನು ಮರುಬಳಕೆಗೆ ಯೋಗ್ಯವಾಗುವಂತೆ ಮಾಡಬೇಕೆಂದು ಮುಖ್ಯೋಪಾಧ್ಯಾಯರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಡಿಡಿಇ ತಿಳಿಸಿದ್ದಾರೆ. ಜನವರಿ 31ರ ಮೊದಲು ಜಲಶಕ್ತಿ ಅಭಿಯಾನದ ಪೆÇೀರ್ಟಲ್ಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆಸಿದ ಜಲ ಸಂರಕ್ಷಣಾ ಚಟುವಟಿಕೆಗಳ ಕುರಿತಾದ ವರದಿ ಮತ್ತು ಚಿತ್ರಗಳನ್ನು ಅಪ್ಲೋಡ್ ಮಾಡಲು ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಕಛೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಎಡಿಎಂ ಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಭೂಗರ್ಭ ಜಲ ಅಧಿಕಾರಿ ಅರುಣ್ದಾಸ್ ವಿಷಯ ಮಂಡಿಸಿದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್, ಎನ್ಐಸಿಡಿಐಒ ಕೆ.ಲೀನಾ, ನವ ಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ವಿಭಾಗೀಯ ಅರಣ್ಯಾಧಿಕಾರಿ ಕೆ. ಅಶ್ರಫ್, ಪ್ರಮುಖ ನೀರಾವರಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಟಿ. ಸಂಜೀವ್, ನಬಾರ್ಡ್ ಡಿಡಿಎಂ ಕೆ.ಎಸ್. ಶರೋನ್ವಾಸ್, ಸಿಆರ್ಡಿ ಪ್ರತಿನಿಧಿ ಕೆ.ಎ. ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.


