ಕಾಸರಗೋಡು: 2024 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಚಟುವಟಿಕೆಗಳಲ್ಲಿ ಉತ್ತಮ ವಿಚಾರಗಳ ಅನುಷ್ಠಾನಕ್ಕಾಗಿ ಮುಖ್ಯ ಚುನಾವಣಾಧಿಕಾರಿ ನೀಡುವ ಗೌರವಕ್ಕೆ ಪಾತ್ರರಾದ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಅವರನ್ನು ಅಖಿಲ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ಪೂರ್ವಘಟಕ ವತಿಯಿಂದ ಅವರ ಚೇಂಬರ್ನಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭ ಘಟಕದ ಅಧ್ಯಕ್ಷ ಅಜಿತ್ ಹಾಗೂ ಕಾರ್ಯದರ್ಶಿ ಸುಜಿತ್ ಅವರು ಜಿಲ್ಲಾಧಿಕಾರಿಯನ್ನು ಶಾಲುಹೊದಿಸಿ, ಸಮರಣಿಕೆ ನೀಡಿ ಗೌರವಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬಿ.ಜೆ, ವಲಯ ಅಧ್ಯಕ್ಷ ಹಾಗೂ ಘಟಕದ ಪ್ರಭಾರಿ ಸನ್ನಿ ಜೇಕಬ್, ಘಟಕ ಕೋಶಾಧಿಕಾರಿ ಮನೀಶ್, ಉಪಾಧ್ಯಕ್ಷ ಅಖಿಲ್, ಪಿಆರ್ಒ ಶ್ರೀಕಾಂತ್ ಉಪಸ್ಥಿತರಿದ್ದರು.


