ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಡಿ ಜಾರಿಗೊಳಿಸಲಾದ ವಸತಿ ಪುನಃಸ್ಥಾಪನೆ ಯೋಜನೆ 'ಸೇಫ್ ಯೋಜನೆ'ಯನ್ವಯ ಪರಿಶಿಷ್ಟ ಜಾತಿ ಕುಟುಂಬಗಳಿಗೆ ವಸತಿ ಕಾಮಗಾರಿಪೂರ್ತಿಗೊಳಿಸಲು ಅಥವಾ ಪುನಃಸ್ಥಾಪನೆಗೆ ಅಗತ್ಯವಾದ ಆರ್ಥಿಕ ನೆರವು ನೀಡಲಾಗುವುದು. ಒಂದು ಲಕ್ಷ ರೂ ವರೆಗಿನ ವಾರ್ಷಿಕ ಆದಾಯ ಹೊಂದಿರುವ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಒಳಗೊಂಡಿರುವ ಈ ಯೋಜನೆ, ಐದು ವರ್ಷಗಳೊಳಗೆ ಮನೆಗಳ ನಿರ್ಮಾಣ ಪೂರ್ತಿಗೊಳಿಸಲಾಗದ ಮತ್ತು ಆರ್ಥಿಕ ನೆರವು ಪಡೆಯದವರನ್ನು ಪರಿಗಣಿಸಲಾಗುವುದು. ಈ ಯೋಜನೆಯಲ್ಲಿ 50,000, 1,00,000 ಮತ್ತು 50,000 ಎಂಬೀ ಮೂರು ಕಂತುಗಳಾಗಿ ಆರ್ಥಿಕ ನೆರವು ನೀಡಲಾಗುವುದು.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಡಿಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾ ಸಾಮಥ್ರ್ಯವನ್ನು ಸುಧಾರಿಸಲು ಅನುಕೂಲಕರವಾದ ಪರಿಸ್ಥಿತಿಗಳನ್ನು ಒದಗಿಸುವ ಯೋಜನೆಯಾಗಿರುವ 'ಅಧ್ಯಯನ ಕೊಠಡಿ' ನಿರ್ಮಾಣಕ್ಕೆ ಮೊತ್ತ ಒದಗಿಸಲಾಗುವುದು. 800 ಚದರ ಅಡಿ ವಿಸ್ತೀರ್ಣದ ಮನೆಗಳಲ್ಲಿ ವಾಸಿಸುವ 5ರಿಂದ 12ನೇ ತರಗತಿವರೆಗೆ ಕಲಿಯುವ ವಿದ್ಯಾರ್ಥಿಗಳಿಗೆ 20 ಚದರ ಅಡಿ ವಿಸ್ತೀರ್ಣದ ಒಂದು ಅಧ್ಯಯನ ಕೊಠಡಿಯನ್ನು 2 ಲಕ್ಷ ರೂ ಆರ್ಥಿಕ ನೆರವಿನಲ್ಲಿ ನಿರ್ಮಿಸಲಾಗುವುದು. ಈ ಆರ್ಥಿಕ ನೆರವು ನಾಲ್ಕು ಹಂತಗಳಲ್ಲಿ ಬ್ಯಾಂಕ್ ಖಾತೆಯ ಮೂಲಕ ವಿತರಿಸಲಾಗುವುದು. ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಸೂಕ್ಷ್ಮ ಹಾಗೂ ಪ್ರಯೋಜನಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.

